ಡಿಸೆಂಬರ್ 02: ಕಿಮೀಗೆ ಇಂತಿಷ್ಟೇ ದರವನ್ನು ಪ್ರಯಾಣಿಕರಿಂದ ತೆಗೆದುಕೊಳ್ಳಬೇಕೆಂದು ಕರ್ನಾಟಕ ಸಾರಿಗೆ ಇಲಾಖೆ (Karnataka Transport) ಓಲಾ (Ola), ಊಬರ್ (Ubar) ಆಟೋಗಳಿಗೆ ದರ ನಿಗದಿ ಮಾಡಿದೆ. ಆದರೆ, ಈ ನಿಯಮವನ್ನು ಮೀರಿ ಓಲಾ, ಊಬರ್ ಕಂಪನಿಗಳು ಮಳೆ ಬಂದಾಗ ಒಂದು ದರ, ಪೀಕ್ ಅವರ್ನಲ್ಲಿ ಒಂದು ದರ ಎಂದು ದುಪ್ಪಟ್ಟು ಹಣವನ್ನು ವಸೂಲಿ ಮಾಡಿ ಪ್ರಯಾಣಿಕರಿಗೆ ತೊಂದರೆ ನೀಡುತ್ತಿವೆ.
ಇದಕ್ಕೆ ಕಡಿವಾಣ ಹಾಕಲು ಇಬ್ಬರು ಯುವಕರು ನಗರ ಮೀಟರ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ಆರ್ಟಿಒ ರೂಲ್ಸ್ ಪ್ರಕಾರ ಆಟೋದಲ್ಲಿ ಎರಡು ಕಿಮೀಗೆ ಮಿನಿಮಮ್ ಚಾರ್ಜ್ 30 ರುಪಾಯಿ ನಂತರದ ಕಿಮೀಗೆ 15 ರೂಪಾಯಿ ಪಡೆದುಕೊಳ್ಳಬೇಕು.
ಆದರೆ, ಈ ಅಗ್ರಿಗೇಟರ್ ಕಂಪನಿಗಳು ಮಳೆ ಬರುತ್ತಿರುವ ಸಮಯದಲ್ಲಿ ಒಂದು ದರ, ಪೀಕ್ ಅವರ್ನಲ್ಲಿ ಒಂದು ದರ ಎಂದು ಒನ್ ಟು ಡಬಲ್ ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡಲು ಮುಂದಾಗಿವೆ. ಇದಕ್ಕೆ ಬ್ರೇಕ್ ಹಾಕಲು ನಿರಂಜನ್ ಮತ್ತು ಶಿವು ಎಂಬ ಇಬ್ಬರು ಯುವಕರು ಸೇರಿ ಮೀಟರ್ ಆ್ಯಪ್ ಸೃಷ್ಟಿಸಿದ್ದಾರೆ. ಆಟೋ ಮತ್ತು ಕ್ಯಾಬ್ ಚಾಲಕರು ಮೀಟರ್ ಹಾಕಿಕೊಂಡು ಡ್ಯೂಟಿ ಮಾಡಬಹದು.