ಯಮಕನಮರ್ಡಿ ಪೊಲೀಸರ ಕಾರ್ಯಕ್ಕೆ ಶ್ಲಾಘನೆ
ಚಿನ್ನಾಭರಣ ಕದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸುವಲ್ಲಿ ಯಮನಕನಮರ್ಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಇಸ್ಲಾಂಪುರದ ಅಡಿವೆಪ್ಪ ಲಗಮಪ್ಪ ಬಾಗರಾಯಿ ಅವರ 30 ಗ್ರಾಮ ಚಿನ್ನ ಕಳುವಾಗಿತ್ತು.
ಇನ್ನು ಯಮಕನಮರ್ಡಿಯ ಸವಿತಾ ಬಸವರಾಜ್ ನಗಾರಿ ಅವರ 25 ಗ್ರಾಮ ಚಿನ್ನವನ್ನು ಕದಿಯಲಾಗಿತ್ತು. ಯಮಕನಮರ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಕಾರ್ಯಾಚರಣೆ ನಡೆಸಿ ಬೇಡರಹಟ್ಟಿ ಮೂಲದ ಸದ್ಯ ದಾದಬಾನಟ್ಟಿಯ ಲಕ್ಷ್ಮಿಕಾಂತ್ ಕೃಷ್ಣಪ್ಪ ಬೇಡರಟ್ಟಿ, ಉಳ್ಳಾಗಡ್ಡಿ ಖಾನಾಪುರ ಮೂಲದ ಸದ್ಯ ದಾದಬಾನಟ್ಟಿಯ ಈರಪ್ಪ ರವಿ ನಾಯಿಕ ಮತ್ತು ದಾದಬಾನಟ್ಟಿ ಮೂಲದ ಸಂಜಯ ಸುರೇಶ ಗಡದಕ್ಕಿ ಎಂಬುವರನ್ನು ಯಮಕನಮರ್ಡಿ ಪೊಲೀಸರು ಬಂಧಿಸಿದ್ದಾರೆ. ಒಟ್ಟು 55 ಗ್ರಾಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.