Breaking News

ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ  ಮೌಢ್ಯಕ್ಕೆ ಸೆಡ್ಡು ಹೊಡೆದ ಕೆಪಿಸಿಸಿ  ಕಾರ್ಯಾಧ್ಯಕ್ಷ,

Spread the love

ಗೋಕಾಕ:  ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ  ಮೌಢ್ಯಕ್ಕೆ ಸೆಡ್ಡು ಹೊಡೆದ ಕೆಪಿಸಿಸಿ  ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಕುಟುಂಬ ಸದಸ್ಯರು ಮತ್ತು ಕಾರ್ಯಕರ್ತರೊಂದಿಗೆ ಉಪಹಾರ ಸೇವಿಸಿದರು.

ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಭಾನುವಾರ ತಮ್ಮ ಮಕ್ಕಳಾದ ಪ್ರಿಯಾಂಕಾ ಹಾಗೂ ರಾಹುಲ್ ಜತೆಗೆ ಉಪಹಾರ ಸೇವಿದರು.

ಇದೇ ವೇಳೆ ‘ಉದಯನಾಡು’ದೊಂದಿಗೆ  ಮಾತನಾಡಿದ ಅವರು,  ಸೂರ್ಯ, ಚಂದ್ರ ಗ್ರಹಣ ಗೋಚರ ಇದೊಂದು  ಸಹಜ ಪ್ರಕ್ರಿಯೆ, ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಜನರಲ್ಲಿ ಭಯ ಮೂಡಿಸುವ  ವ್ಯವಸ್ಥೆ ಮೊದಲಿನಿಂದಲೂ ಬಂದಿದೆ. ಈಗಲೂ ಸಹ ಮುಂದುವರೆಯುತ್ತಿದೆ. ಇತಿಹಾಸದಲ್ಲಿ  ಇದಕ್ಕೆ ವಿರೋಧ ವ್ಯಕ್ತವಾಗಿದೆ.  ನಾವೂ ಕೂಡ ಹಲವಾರು ಕಾರ್ಯಕ್ರಮಗಳ ಮಾಡಿ,  ಸ್ಮಶಾನದಲ್ಲಿ  ಆಹಾರ ಸೇವಿಸುವ ಮೂಲಕ ಮೌಢ್ಯದ ವಿರುದ್ದ ಹೋರಾಟ ಮಾಡುತ್ತಾ ಬಂದಿದ್ದೇವೆ,  ಈ ಕಾರ್ಯಕ್ರಮಗಳ ಮೂಲಕ ಜನರಿಗೆ ಇಂತವುಗಳಿಂದ ಯಾವ ತೊಂದರೆಯಾಗಲ್ಲ ಎಂಬುವುದನ್ನು ತೋರಿಸಿಕೊಟ್ಟಿದ್ದೇವೆ. 

ಇಂದು ಸಹ  ಅಲ್ಪ ಉಪಹಾರ ಸೇವಿಸಿ  ಜನರಿಗೆ ಜಾಗೃತಿ ಮೂಡಿಸುತ್ತಿದ್ದೇವೆ.  ತಂತ್ರಜ್ಞಾನ ಯುಗದಲ್ಲಿ  ಜನರು  ಮೌಢ್ಯದಿಂದ ಹೊರಬರಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ   ಜಯಶ್ರೀ ಮಾಳಗಿ, ಹಬೀಬ್ ಶಿಲ್ಲೇದಾರ್, ಶರಣು ಪಾಟೀಲ್, ಶ್ರೀಶೈಲ್ ಅಂಟಿನ್, ಪ್ರಕಾಶ ಬಾಗೇವಾಡಿ,  ಇಮಾಮ್ ಅಂಡಗಿ ಸೇರಿದಂತೆ ಮುಂತಾದವರು ಇದ್ದರು.


Spread the love

About Laxminews 24x7

Check Also

ಚಿಕ್ಕೋಡಿ ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ನೆರವೇರಿಸಿದರು.

Spread the love ಚಿಕ್ಕೋಡಿ ನಗರದಲ್ಲಿರುವ ಸಂಸದರ ಕಚೇರಿಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ಸಂಸದೆ ಪ್ರಿಯಾಂಕಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ