ಕಿತ್ತೂರು: ಇಲ್ಲಿಯ ಗುರುವಾರಪೇಟೆಯ ಶ್ರೀನಾಥ ಉಮರ್ಜಿ ಹಾಗೂ ಸಂಗೋಜಿ ಕುಟುಂಬಕ್ಕೆ ಸೇರಿದ ಮನೆಯ ಗೋಡೆ ಮಂಗಳವಾರ ಕುಸಿದು ಬಿದ್ದಿದೆ. ಮಲಗುವ ಕೋಣೆಯ ಗೋಡೆಯಾಗಿದ್ದರಿಂದ ಕುಟುಂಬಸ್ಥರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ಉಮರ್ಜಿ ಮತ್ತು ಸಂಗೋಜಿ ಕುಟುಂಬದ ಎರಡೂ ಮನೆಗಳಿಗೂ ಇದೊಂದೇ ಗೋಡೆಯಾಗಿತ್ತು.
ಸಂಗೋಜಿ ಅವರ ಮನೆಯಲ್ಲಿ ಸದ್ಯ ಯಾರೂ ವಾಸಿಸುತ್ತಿಲ್ಲ. ಆದರೆ ಮನೆ ಸೋರುವ ವಿಷಯ ಅವರಿಗೆ ತಿಳಿಸಲಾಗಿತ್ತು. ಬೇಗ ಗಮನ ಹರಿಸದ್ದರಿಂದ ಉಮರ್ಜಿ ಅವರ ಮನೆ ಕಡೆಗೆ ಗೋಡೆ ಬಾಗಿ ಬಿದ್ದಿದೆ ಎನ್ನಲಾಗಿದೆ.
ಕೊಠಡಿಯಲ್ಲಿ ಬಾರಿ ಮಣ್ಣು ಸಂಗ್ರಹವಾಗಿದೆ.
Laxmi News 24×7