ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಹೋರಾಟ ರೈತ ಮಕ್ಕಳಿಗೆ ಮೀಸಲು ನ್ಯಾಯ ಒದಗಿಸುವ ಹೋರಾಟವಾಗಿದೆ. ಸಾಮಾಜಿಕ ನ್ಯಾಯ, ಮೀಸಲು ಬಗ್ಗೆ ಸಕಾರಾತ್ಮಕ ಚಿಂತನೆ ಹೊಂದಿದ ಮುಖ್ಯಮಂತ್ರಿಯವರು ಮೀಸಲು ಬೇಡಿಕೆಗೆ ಕಾಲಮಿತಿ ಕ್ರಮದ ಭರವಸೆ ನೀಡದಿರುವುದು ಬೇಸರ-ನೋವು ತರಿಸಿದೆ.
ಸಮಾಜದ ಕೆಲವರು ಮೀಸಲು ಹೋರಾಟವನ್ನು ಟ್ರಂಪ್‌ಕಾರ್ಡ್ ಆಗಿಸಿಕೊಂಡು ಅಧಿಕಾರಕ್ಕೇರಿ, ಹೋರಾಟವನ್ನೇ ಮರೆತಿದ್ದಾರೆ, ಮೌನ ತಾಳಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸರಕಾರ 2ಡಿ ಮೀಸಲು ನೀಡಲು ಮುಂದಾದರೂ, 2ಎ ಮೀಸಲು ಹೋರಾಟ ಜೀವಂತವಾಗಿರಿಸಿ 2ಡಿ ಮೀಸಲು ಒಪ್ಪಿಕೊಳ್ಳಲು ಸಮಾಜ ಸಿದ್ಧವಿದೆ ಎನ್ನುತ್ತಾರೆ
ಪಂಚಮಸಾಲಿ ಸಮಾಜದ ಮೀಸಲು ಹೋರಾಟ ಮುಂದಿನ ಹೆಜ್ಜೆ ಏನು?
ಮುಖ್ಯಮಂತ್ರಿ ಅವರಿಂದ ನಮ್ಮ ಬೇಡಿಕೆಗೆ ಕಾಲಮಿತಿ ನಿಗದಿಯ ಸೂಕ್ತ ಭರವಸೆ ದೊರೆಯದಿರುವುದು ನೋವು ತರಿಸಿದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಸುಮಾರು 10 ಲಕ್ಷ ಜನರೊಂದಿಗೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ. ವಿವಿಧ ಹಂತದ ಹೋರಾಟ ಮುಂದುವರೆಸುತ್ತೇವೆ. ನ್ಯಾಯ ಸಿಗುವ ತನಕ ಯಾವ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ.
Laxmi News 24×7