ಹೊನ್ನಾಳಿ: ತಾಲ್ಲೂಕಿನ ಕೋಟೆಮಲ್ಲೂರು ಗ್ರಾಮದಿಂದ ಹೊನ್ನೂರು ವಡ್ಡರಹಟ್ಟಿ, ಚಿಕ್ಕಗೋಣಿಗೆರೆ, ಹಿರೇಗೋಣಿಗೆರೆ, ಹರಗನಹಳ್ಳಿ ಹಾಗೂ ಕೋಣನತಲೆ ಗ್ರಾಮದವರೆಗಿನ 9 ಕಿ.ಮೀ ಉದ್ದದ ರಸ್ತೆ ಹಾಳಾಗಿದ್ದು, ಕೂಡಲೇ ದುರಸ್ತಿಪಡಿಸಬೇಕು ಎಂದು ಈ ಭಾಗದ ಗ್ರಾಮಸ್ಥರು ದೂರಿದ್ದಾರೆ.

‘ಕೋಟೆಮಲ್ಲೂರು ದಾಟಿದ ನಂತರ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವುದು ಕಷ್ಟವಾಗುತ್ತಿದೆ’ ಎಂದು ಬೇಲಿಮಲ್ಲೂರು ಗ್ರಾಮದ ಉಮೇಶ್, ಹಿರೇಗೋಣಿಗೆರೆ ಜಿ.ಎಚ್. ವೀರೇಶ್ ದೂರಿದ್ದಾರೆ.
‘ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ರಸ್ತೆಯಲ್ಲಿ ಗುಂಡಿ ಬಿದ್ದು ನೀರು ಸಂಗ್ರಹವಾಗಿದ್ದು, ಕೆಲವರು ಬೈಕ್‌ಗಳಿಂದ ಇಳಿದು ತಳ್ಳಿಕೊಂಡು ಓಡಾಡುತ್ತಿದ್ದಾರೆ’ ಎನ್ನುತ್ತಾರೆ ಸ್ಥಳೀಯರಾದ ಶಶಿಧರ್ ಮತ್ತು ರಾಘವೇಂದ್ರ.
ಹರಗನಹಳ್ಳಿ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಹಾಗೂ ಶಾಸಕರು ಈ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಭಜನೆ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
Laxmi News 24×7