Breaking News

ದಾವಣಗೆರೆ: ವಾಲ್ಮೀಕಿ ಜಯಂತಿಗೆ ಬೈಕ್‌ ರ‍್ಯಾಲಿ

Spread the love

ದಾವಣಗೆರೆ: ಜಿಲ್ಲಾ ವಾಲ್ಮೀಕಿ ಯುವಕರ ಸಂಘವು ವಾಲ್ಮೀಕಿ ಜಯಂತಿಯ ಮುನ್ನಾ ದಿನವಾದ ಬುಧವಾರ ನಗರದಲ್ಲಿ ಬೈಕ್‌ ರ‍್ಯಾಲಿ ನಡೆಸಿತು. ಪ್ರಮುಖ ರಸ್ತೆಯಲ್ಲಿ ಸಂಚರಿಸಿ ವಾಲ್ಮೀಕಿ ಸಂದೇಶ ರವಾನಿಸುವ ಪ್ರಯತ್ನ ಮಾಡಿತು.

ಸೋನೆ ಮಳೆಯ ನಡುವೆಯೂ ಹೊಂಡದ ವೃತ್ತದಲ್ಲಿ ಜಮಾಯಿಸಿದ ಯುವಕರು ತಲೆಗೆ ಪೇಟ ಧರಿಸಿ, ಬಾವುಟ ಹಿಡಿದ್ದರು.

ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ವೀರ ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಬೈಕ್‌ ರ‍್ಯಾಲಿಗೆ ಚಾಲನೆ ನೀಡಿದರು.

‘ಬದುಕು ಪರಿವರ್ತನೆ ಮಾಡಿಕೊಂಡ ಮಹರ್ಷಿ ವಾಲ್ಮೀಕಿ ದೊಡ್ಡ ಸಾಧಕರಾದರು. ರಾಮಾಯಣದಂತಹ ಗ್ರಂಥವನ್ನು ರಚಿಸಿದರು. ಅವರಿಗೆ ಗೌರವ ಸಲ್ಲಿಸಲು ಜಯಂತಿಯನ್ನು ಸರ್ಕಾರವೇ ಆಚರಿಸುತ್ತಿರುವುದು ಹರ್ಷದಾಯಕ ಸಂಗತಿ’ ಎಂದು ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.


Spread the love

About Laxminews 24x7

Check Also

ಬೆಳಗಾವಿ ಡಿಸಿಸಿ ಬ್ಯಾಂಕ್ 4 ಕ್ಷೇತ್ರಗಳ ಫಲಿತಾಂಶ ಪ್ರಕಟ: 15 ದಿನಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

Spread the love ಬೆಳಗಾವಿ: ಕೋರ್ಟ್ ವ್ಯಾಜ್ಯದ ಹಿನ್ನೆಲೆಯಲ್ಲಿ ವಿಳಂಬವಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ)ನ ನಾಲ್ಕು ಕ್ಷೇತ್ರಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ