Breaking News

ದ.ಕ.- 54 ಸಾವಿರ, ಉಡುಪಿ- 39 ಸಾವಿರ ಬಿಪಿಎಲ್‌ ಕಾರ್ಡ್‌ ಪರಿಶೀಲನೆಗೆ ಸೂಚನೆ

Spread the love

ಕುಂದಾಪುರ/ಉಡುಪಿ/ಪುತ್ತೂರು: ವೆಚ್ಚ ಕಡಿತಕ್ಕೆ ಮುಂದಾಗಿರುವ ರಾಜ್ಯ ಸರಕಾರವು ಬಿಪಿಎಲ್‌ ಕಾರ್ಡ್‌ಗಳ ಪರಿ ಷ್ಕರಣೆಗೆ ಹೊರಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 54,093 ಮತ್ತು ಉಡುಪಿ ಜಿಲ್ಲೆಯಲ್ಲಿ 39,627 ಕಾರ್ಡ್‌ಗಳ ಪರಿ ಶೀಲನೆಗೆ ಸೂಚನೆ ಬಂದಿದ್ದು, ಈ ಪೈಕಿ ಶೇ.

2ರಷ್ಟು ಕಾರ್ಡ್‌ ರದ್ದಾಗುವ ಸಾಧ್ಯತೆ ಇದೆ. ಆದರೆ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸದೆ ರದ್ದು ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಡ್‌ ಪರಿಷ್ಕರಣೆಗೆ ಮುಂದಾಗಿರು ವುದರಿಂದ ಪೂರಕ ದಾಖಲೆಯನ್ನು ನೀಡು ವುದಕ್ಕಾಗಿ ಪಡಿತರದಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣ ವಾಗಿದ್ದು, ಅನ್ನಭಾಗ್ಯ ಅಕ್ಕಿ ಪಡೆಯುವವರಿಗೆ ಸಮಸ್ಯೆ ಯಾಗಿದೆ. ಮೊದಲಿಗೆ ಅನರ್ಹ ಆಗುವ ಸಾಧ್ಯತೆಯ ಪಡಿತರ ಚೀಟಿಯ ಮಾಹಿತಿಯನ್ನು ಎಲ್ಲ ಪಡಿತರ ವಿತರಕರಿಗೆ ರವಾನಿಸಲಾಗಿದೆ. ಆದಾಯ ಮತ್ತು ಮನೆಯ ಪರಿಸ್ಥಿತಿ ಅವಲೋಕಿಸಿಯೇ ಬಿಪಿಎಲ್‌ ಕಾರ್ಡ್‌ ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಿದೆ.

ಈ ಕಾರಣಕ್ಕಾಗಿ ನಿತ್ಯ ನೂರಾರು ಮಂದಿ ತಾಲೂಕು ಕಚೇರಿಗೆ ಬಂದು ಆಧಾರ್‌, ವರಮಾನ ಮಾಹಿತಿ ಮುಂತಾದ ವಿವರಗಳನ್ನು ನೀಡುತ್ತಿದ್ದಾರೆ.

ಗೊಂದಲ
ಆದಾಯ ತೆರಿಗೆ ಪಾವತಿದಾರರು ಅಲ್ಲದಿದ್ದರೂ ಆದಾಯ ತೆರಿಗೆ ಪಾವತಿದಾರರು ಎಂದು ಕಾರಣ ನೀಡಿ ಅನೇಕರ ಕಾರ್ಡ್‌ ರದ್ದು ಮಾಡಿದ ಕುರಿತು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಐಟಿ ರಿಟರ್ನ್ಸ್ ತನ್ನಿ ಎನ್ನುತ್ತಿದ್ದಾರೆ. ನಾವು ಈವರೆಗೆ ಆದಾಯ ತೆರಿಗೆ ಪಾವತಿಸಿಲ್ಲ. ಎಲ್ಲಿಂದ ದಾಖಲೆ ತರುವುದು’ ಎಂದು ಪಡಿತರ ಚೀಟಿ ರದ್ದಾಗುವ ಭೀತಿಯಲ್ಲಿದ್ದ ಕುಂದಾಪುರದ ಭವಾನಿ ಪ್ರಶ್ನಿಸುತ್ತಾರೆ.

ಆಹಾರ ನಿರೀಕ್ಷಕರಿಗೆ ಅಧಿಕಾರ
ಕಾರ್ಡು ಅಮಾನತು ಹಾಗೂ ರದ್ದು ಮಾಡುವ ಅಧಿಕಾರ ಆಹಾರ ನಿರೀಕ್ಷಕರಿಗಿದೆ. ಕಾರ್ಡ್‌, ಪಡಿತರ ತಡೆಹಿಡಿದರೆ ಆದಾಯ ಪ್ರಮಾಣೀಕರಣ ದಾಖಲಿಸಿ ಪರಿಶೀಲನೆಗೆ ಅರ್ಜಿ ನೀಡಿದರೆ ಆಹಾರ ನಿರೀಕ್ಷಕರು ಖುದ್ದು ಪರಿಶೀಲಿಸಿ ಕಾರ್ಡ್‌ ರದ್ದು, ಅಮಾನತು ಅಥವಾ ಸಕ್ರಿಯಗೊಳಿಸುವ ಬಗ್ಗೆ ನಿರ್ಧರಿಸುತ್ತಾರೆ.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ