Breaking News

ಇಂದು ಬಿಜೆಪಿ ಶಾಸಕನಿಗೆ ಸಿಗುತ್ತಾ ಜಾಮೀನು?

Spread the love

ಬೆಂಗಳೂರು: ಶಾಸಕ ಮುನಿರತ್ನ (BJP MLA MUnirathna ) ವಿರುದ್ಧದ ಅತ್ಯಾಚಾರ ಪ್ರಕರಣದ ಜಾಮೀನು ಆದೇಶ ಇಂದು ಪ್ರಕಟವಾಗಲಿದೆ. ಈಗಾಗಲೇ ವಾದ ಪ್ರತಿವಾದ ಆಲಿಸಿರುವ ಜನಪ್ರತಿನಿಧಿಗಳ ನ್ಯಾಯಾಲಯ (Court of Representatives) ತೀರ್ಪು ಕಾಯ್ದಿರಿಸಿದೆ. ಇಂದು ಮಧ್ಯಾಹ್ನದ ಬಳಿಕ ತೀರ್ಪು (Bail Plea) ಹೊರಬೀಳುವ ಸಾಧ್ಯತೆ ಇದೆ.
ಮುನಿರತ್ನ ವಿರುದ್ಧ ದೂರು ನೀಡಿರುವ ಸಂತ್ರಸ್ತ ಮಹಿಳೆಯಿಂದಲೇ ಮುನಿರತ್ನ ಹನಿಟ್ರ್ಯಾಪ್ (Honey Trap Case) ಮಾಡಿಸಿದ್ದಾರೆ ಅನ್ನೋ ಆರೋಪ ಇದೆ. ಈ ಹಿನ್ನೆಲೆ SIT ಸಾಕ್ಷ್ಯಗಳ ವಿಚಾರಣೆ ಮುಂದುವರೆಸಿದೆ.

ಮತ್ತೊಂದೆಡೆ DNA ಪರೀಕ್ಷೆಗೆ ರಕ್ತದ ಮಾದರಿ ಸಂಗ್ರಹಿಸಲು SIT ಅರ್ಜಿ ಸಲ್ಲಿಸಿದರೆ, ಮುನಿರತ್ನ ಪರ ವಕೀಲರು ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದ್ದಾರೆ. ಈ ಅರ್ಜಿ ವಿಚಾರಣೆಯೂ ಇಂದು 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯಲಿದೆ. ಇದರ ನಡುವೆ ಇಂದು ಮುನಿರತ್ನಗೆ ಜಾಮೀನು ಸಿಗುತ್ತಾ ಕಾದು ನೋಡಬೇಕಿದೆ.

ಇನ್ನು, ಮುನಿರತ್ನ ವಿರುದ್ಧದ ಜಾತಿ ನಿಂದನೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದೆ. ಲೋಹಿತ್, ಕಿರಣ್ ಹಾಗೂ ಮಂಜುನಾಥ್​ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.


Spread the love

About Laxminews 24x7

Check Also

ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಹರಿಸಿದರೆ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬಹುದು ಎಂದು ಮೈಸೂರಿನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

Spread the loveಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ