ಬಸವಕಲ್ಯಾಣ : ಕೆಲವು ದಿನಗಳ ಹಿಂದೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ನಾಪತ್ತೆಯಾಗಿ ಬಳಿಕ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ನಡೆದಿತ್ತು. ಇದೀಗ ಬೀದರ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗಾರ ಅವರ ಆಪ್ತ ಸಂಜುಕುಮಾರ್ ಸುಗರೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು ಸಂಜುಕುಮಾರ್ ಶಾಸಕ ಶರಣು ಸಲಗಾರ್ ಪರಮಾಪ್ತ ಎಂದೇ ಹೇಳಲಾಗುತ್ತಿದೆ. ನಿನ್ನೆ ಬೆಳಿಗ್ಗೆ ಸಂಜುಕುಮಾರ್ ಅವರು, ಬಸವಕಲ್ಯಾಣದ ಜೈಶಂಕರ ಕಾಲೋನಿಯ ತಮ್ಮ ನಿವಾಸದಿಂದ ತೆರಳಿದ್ದಾರೆ ಎನ್ನಲಾಗಿದ್ದು, ಇದುವರೆಗೂ ಇವರ ಸುಳಿವು ಇನ್ನೂ ಸಿಕ್ಕಿಲ್ಲ. ಹೀಗಾಗಿ ಸಹಜವಾಗಿ ಕುಟುಂಬಸ್ಥರು ಆತಂಕದಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.
Laxmi News 24×7