ಪರಮಾನಂದವಾಡಿ: ‘ದುರ್ಗಾದೇವಿ ಮಹಿಮೆಯನ್ನು ಜನರಿಗೆ ತಿಳಿಸುವುದೇ ದೇವಿ ಪುರಾಣದ ಉದ್ದೇಶ’ ಎಂದು ಸುಟ್ಟಟ್ಟಿಯ ಜ್ಞಾನಯೋಗ ವನಶ್ರೀ ಆಶ್ರಮದ ಕಲ್ಮೇಶ್ವರ ಮಹಾರಾಜರು ಹೇಳಿದರು.
ಸಮೀಪದ ನಿಲಜಿಯ ದುರ್ಗಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ದೇವಿ ಪಾರಾಯಣ ಮತ್ತು ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುರ್ಗಾದೇವಿ ಮೂರ್ತಿ ಮೆರವಣಿಗೆ ಗಮನಸೆಳೆಯಿತು. ದೇವಿ ಅವತಾರದಲ್ಲಿದ್ದ 108 ಮಹಿಳೆಯರ ಪಾದಪೂಜೆ ಮಾಡಿ, ಉಡಿ ತುಂಬಲಾಯಿತು. ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಮಂತ ಬಿರಡಿ, ತಮ್ಮಣ್ಣ ದೇವಮಾನೆ, ನೀಲಪ್ಪ ಕಾಂಬಳೆ, ಸಹದೇವ ಕಾಂಬಳೆ, ಭೂಪಾಲ ಸನದಿ ಇದ್ದರು.
Laxmi News 24×7