Breaking News

ಕುಂದಾಪುರದಿಂದ ತಿರುಪತಿಗೆ ರೈಲು: ವಿಜಯ ದಶಮಿಯಂದು ಚಾಲನೆ

Spread the love

ಕುಂದಾಪುರ: ವಿಜಯದಶಮಿಯ ದಿನದಂದು ಕರಾವಳಿಯಿಂದ ತಿರುಪತಿಗೆ ರೈಲು ಸಂಪರ್ಕ ಆರಂಭವಾಗಲಿದ್ದು, ಆ ಮೂಲಕ ಕರಾವಳಿಗರ ದೀರ್ಘ‌ ಕಾಲದ ಬೇಡಿಕೆ ಈಡೇರಿದಂತಾಗಲಿದೆ.

ವಿಸ್ತರಣೆಗೊಂಡ ಕಾಚಿಗುಡ ರೇಣಿಗುಂಟ ತಿರುಪತಿ ಮಂಗಳೂರು ರೈಲಿನ ಮೊದಲ ಓಡಾಟವು ಶನಿವಾರ ಆರಂಭಗೊಳ್ಳಲಿದೆ.

ಈ ರೈಲು ಕೊಯಮತ್ತೂರು ಮೂಲಕವೂ ಓಡಲಿರುವುದರಿಂದ ಸದ್ಗುರು ಜಗ್ಗಿ ವಾಸುದೇವರ ಈಶ ಯೋಗ ಕೇಂದ್ರ ಮತ್ತು ಆದಿ ಯೋಗಿ ದರ್ಶನಕ್ಕೂ ಸಹಾಯವಾಗಲಿದೆ.

ವೇಳಾಪಟ್ಟಿ
ಮುರುಡೇಶ್ವರದಿಂದ ಬುಧವಾರ, ಶನಿವಾರ, ತಿರುಪತಿಯಿಂದ ಮಂಗಳವಾರ, ಶುಕ್ರವಾರ ಎಂದು ವಾರಕ್ಕೆರಡು ದಿನ ಓಡಲಿದೆ. ಅ.12ರ ಶನಿವಾರ ಮುರುಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡುವ ರೈಲು 3.54ಕ್ಕೆ ಬೈಂದೂರು, ಕುಂದಾಪುರಕ್ಕೆ 4. 40, ಬಾರಕೂರು 5, ಉಡುಪಿ 5.20ಕ್ಕೆ, ಮಂಗಳೂರು 7.55ಕ್ಕೆ ತಲುಪಲಿದೆ.

ಮಂಗಳೂರಿನಿಂದ ರಾತ್ರಿ 8.05 ಗಂಟೆಗೆ ಹೊರಟ ರೈಲು ತಿರುಪತಿಗೆ ರವಿವಾರ ಬೆಳಗ್ಗೆ 11.30ಕ್ಕೆ ರೇಣಿಗುಂಟ (ತಿರುಪತಿಗೆ )ಹಾಗೂ ಹೈದರಾಬಾದ್‌ನ ಕಾಚಿಗುಡಕ್ಕೆ ಸಂಜೆ 6 ಗಂಟೆಗೆ ತಲುಪಲಿದೆ.

ಕುಂದಾಪುರದಿಂದ ತಿರುಪತಿಗೆ ಸ್ಲೀಪರ್ ಕೋಚ್‌ನಲ್ಲಿ 510 ರೂ. ಹವಾನಿಯಂತ್ರಿತ ಕೋಚ್‌ನಲ್ಲಿ 1,100 ರೂ. ಟಿಕೆಟ್‌ ದರ ಇದೆ. ಮಂತ್ರಾಲಯಕ್ಕೆ ಹೋಗುವವರಿಗೂ ಇದು ಅನುಕೂಲಕರವಾಗಿದ್ದು, ದೋನೆ ಜಂಕ್ಷನ್‌ ಸಹಿತ ಹೈದರಾಬಾದ್‌ಗೂ ರೈಲು ಸಂಪರ್ಕ ಪಡೆಯಬಹುದು.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ