Breaking News

ಶೋ ಹಾಳು ಮಾಡೋಕೆ ನಿಮ್ಮ ಅಪ್ಪನ ಆಣೆ ಸಾಧ್ಯವಿಲ್ಲʼ;ಕಿರಿಕ್‌ ಮಾಡಿದ್ದ ಜಗದೀಶ್‌..ಕಿಚಾಯಿಸಿದ ಸುದೀಪ್‌..!

Spread the love

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಮಹತ್ವದ ಘಟ್ಟಕ್ಕೆ ತಲುಪಿದೆ. ಇಂದು ವಾರದ ಕಥೆ ಕಿಚ್ಚನ ಜೊತೆಯತ್ತ ಪ್ರೇಕ್ಷಕರ ಗಮನ ಹೋಗಿದೆ. ಬಿಗ್‌ಬಾಸ್‌ ಸ್ಪರ್ಧಿ ಲಾಯರ್‌ ಜಗದೀಶ್‌ ಅವರು ಮೊದಲ ವಾರ ಸೃಷ್ಟಿಸಿದ ಕೆಲವು ಅವಾಂತರಗಳು, ಬಿಗ್‌ಬಾಸ್‌ ಶೋ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇ ಈ ಕ್ಯೂರಿಯಾಸಿಟಿಗೆ ಕಾರಣ.

ಖಡಕ್‌ ಮಾತು..ನೇರ ನುಡಿ ಮತ್ತು ಸ್ಪರ್ಧಿಗಳ ತಪ್ಪನ್ನ ನಾಜೂಕಾಗಿಯೇ ಎತ್ತಿತೋರಿಸುವ ಕಿಚ್ಚ, ಟೈಮ್‌ ಬಂದಾಗ್ಲೆಲ್ಲ ಬಿಗ್‌ಬಾಸ್‌ ವೇದಿಕೆ ಮೇಲೆ ರಾಂಗ್‌ ಆಗಿದ್ದಾರೆ. ಕೆಲವು ಸ್ಪರ್ಧಿಗಳು ತಮ್ಮ ಮಿತಿಮೀರಿದ ಮಾತು, ನಡವಳಿಕೆಯ ಕಾರಣಕ್ಕೆ ಸುದೀಪ್‌ ಅವರ ಬಳಿ ಬೈಸಿಕೊಂಡಿದ್ದೂ ಇದೆ. ʼಬಿಗ್‌ಬಾಸ್‌ ಬಂಡವಾಳವನ್ನೇ ಬಯಲುಮಾಡ್ತೇನೆ..ಈ ಶೋವನ್ನೇ ಉಡೀಸ್‌ ಮಾಡ್ತೇನೆʼ ಎಂದಿದ್ದ ಲಾಯರ್‌ ಜಗದೀಶ್‌ಗೆ ಕಿಚ್ಚ ಸುದೀಪ್‌ ಕ್ಲಾಸ್‌ ಹೇಗಿರಬಹುದು? ಎಂದು ಅನೇಕರು ಕಾಯುತ್ತಿದ್ದಾರೆ.

ಖಡಕ್‌ ಸಂದೇಶ ಕೊಟ್ಟ ಕಿಚ್ಚ ಸುದೀಪ್‌..

ಎಲ್ಲರೂ ಅಂದುಕೊಂಡಂತೆ ಕಿಚ್ಚ ಸುದೀಪ್‌ ಅವರು ಜಗದೀಶ್‌ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಗಂಭೀರವಾಗಿ ಬೈದಿಲ್ಲ. ಆದರೆ ತಮ್ಮ ಎಂದಿನ ಶೈಲಿಯಲ್ಲಿ, ರೇಷ್ಮೆ ಬಟ್ಟೆಯಲ್ಲಿ ಕಲ್ಲಿಟ್ಟು ಹೊಡೆದಂತೆ ಮಾತನಾಡಿ ಜಗದೀಶ್‌ ತಪ್ಪು ಅರ್ಥ ಮಾಡಿಸಿದ್ದಾರೆ. ನೀವು ಕ್ಯಾಮರಾಮುಂದೆ ಬಿಗ್‌ಬಾಸ್‌ಗೆ ಬೈದಿದ್ದು ಜೋಕ್‌ ಎಂದು ಹೇಳಿದ್ದಾರೆ. ಇವೆಲ್ಲವನ್ನ ಇಂದು ಕಲರ್ಸ್‌ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ನೋಡಬಹುದು,

ಕಿರಿಕ್‌ ಮಾಡಿದ್ದ ಜಗದೀಶ್‌..ಕಿಚಾಯಿಸಿದ ಸುದೀಪ್‌..!

ಜಗದೀಶ್‌ ಅವರ ಬಳಿ ಮಾತನಾಡಿದ ಕಿಚ್ಚ ಸುದೀಪ್‌ ʼಜಗದೀಶ್‌ ನೀವು ಹೇಳಿ ನಮಗೆ ಶೋ ಹೇಗೆ ನಡೆಸಿಕೊಡಬೇಕು ಅಂತ..ʼ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರಿಸಿದ ಜಗದೀಶ್‌ ʼಇಲ್ಲ ನಿಮ್ಮದು ಕರೆಕ್ಟ್‌ ಆಗಿಯೇ ಇದೆ..ತಪ್ಪಿಲ್ಲʼ ಎನ್ನುತ್ತಾರೆ. ಆಗ ನಗುನಗುತ್ತಲೇ, ಖಡಕ್‌ ಪ್ರತಿಕ್ರಿಯೆ ಕೊಟ್ಟ ಕಿಚ್ಚ ಸುದೀಪ್‌ ʼಶೋ ಖಡಾಖಂಡಿತವಾಗಿಯೂ ಕರೆಕ್ಟ್‌ ಆಗಿಯೇ ಇದೆ..ಇಲ್ಲ ಅಂದ್ರೆ, ನನ್ನ ಮಗಂದು 11ನೇ ಸೀಸನ್‌ವರೆಗೆ ಬರ್ತಾನೆ ಇರ್ಲಿಲ್ಲʼ ಎನ್ನುತ್ತಾರೆ. ಸುದೀಪ್‌ ಈ ಮಾತಿಗೆ ಮನೆಮಂದಿಯೆಲ್ಲ ನಗುತ್ತಾರೆ. ಜಗದೀಶ್‌ ಗಪ್‌ಚುಪ್‌ ಆಗುತ್ತಾರೆ..

ಇದು ಇಷ್ಟಕ್ಕೇ ನಿಲ್ಲುವುದಿಲ್ಲ ʼಜಗದೀಶ್‌ ನೀವು ಕ್ಯಾಮರಾ ಎದುರು ಬಿಗ್‌ಬಾಸ್‌ಗೆ ಚಾಲೆಂಜ್‌ ಮಾಡಿದ್ರಲ್ಲ, ಅದು ತಪ್ಪೇ ಅಲ್ಲ..ಸರ್‌, ಅದೊಂದು ಜೋಕ್‌, ಬಿಗ್‌ಬಾಸ್‌ ಒಂದು ಅದ್ಭುತ ಶೋ..ಅದನ್ನ ಇನ್ನಷ್ಟು ಸುಧಾರಿಸುವ ಸಾಧ್ಯತೆ ಈಗ ಇರುವ ನಿಮ್ಮ ಕೈಯಲ್ಲೇ ಇದೆ. ಆದರೆ ಈ ಶೋ ಹಾಳು ಮಾಡೋಕೆ ನಿಮ್ಮ ಅಪ್ಪನಾಣೆ, ನಿಮ್ಮ ಕೈಯಲ್ಲಿ ಸಾಧ್ಯವಿಲ್ಲʼ ಎಂದು ಸುದೀಪ್‌ ಖಡಕ್‌ ಆಗಿ ಹೇಳಿದ್ದಾರೆ.


Spread the love

About Laxminews 24x7

Check Also

ಪಟಾಕಿ ತಾಗಿದ್ದಕ್ಕೆ ಸಿಡಿಮಿಡಿ; ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ

Spread the loveಬೆಂಗಳೂರು: ಪಟಾಕಿ ಕಿಡಿ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ