ಶಿವಮೊಗ್ಗ, : ವಿಶ್ವವಿಖ್ಯಾತ ಮೈಸೂರು ದಸರಾ(Dasara)ಬಿಟ್ಟರೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಅದ್ಧೂರಿ ದಸರಾ ನಡೆಯಲಿದೆ. ದಸರಾ ಅಂದರೆ ಅಲ್ಲಿ ಆನೆಗಳು ಇರಲೇಬೇಕು. ಶಿವಮೊಗ್ಗ ದಸರಾಕ್ಕೆ ಈ ಬಾರಿ ಮೂರು ಆನೆಗಳು ಎಂಟ್ರಕೊಡುತ್ತಿವೆ. ಸಕ್ರೆಬೈಲಿನ ಆನೆ ಬಿಡಾರದಲ್ಲಿ ದಸರಾಕ್ಕೆ ಮೂರು ಆನೆಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ಶಿವಮೊಗ್ಗದಲ್ಲಿ ಅದ್ಧೂರಿ ದಸರಾ ಜಂಬೂ ಸವಾರಿ
ಮೈಸೂರು ಬಿಟ್ಟರೇ ಅದ್ದೂರಿ ದಸರಾ ನೋಡಲು ಸಿಗುವುದು ಶಿವಮೊಗ್ಗ ನಗರದಲ್ಲಿ. ದಶಕಗಳಿಂದ ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿಯು ಅದ್ಧೂರಿಯಾಗಿ ನಡೆಯುತ್ತಿದೆ. ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ಮೈಸೂರು ಮಾದರಿಯಲ್ಲಿಯೇ ಆನೆಯನ್ನು ಬಳಸಿಕೊಳ್ಳುವುದು ಶಿವಮೊಗ್ಗ ದಸರಾ ಮತ್ತೊಂದು ವಿಶೇಷವಾಗಿದೆ.
Laxmi News 24×7