ಲಕ್ನೋ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಪ್ರತಿನಿಧಿಸುತ್ತಿರುವ ವಾರಾಣಸಿಯ ರಸ್ತೆಯೊಂದರ ಚಿತ್ರವನ್ನು ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್(Akhilesh Yadav) ಅವರು ನಗರದಲ್ಲಿ ಸ್ವಚ್ಛತೆಯ ಕೊರತೆಯ ಬಗ್ಗೆ ಬಿಜೆಪಿ(BJP) ಸರಕಾರದ ವಿರುದ್ಧ ಸೋಮವಾರ(ಸೆ30) ಟೀಕಾ ಪ್ರಹಾರ ನಡೆಸಿದ್ದಾರೆ.
ಎಕ್ಸ್ ನಲ್ಲಿ ಕಸದ ರಾಶಿಯ ಫೋಟೋವೊಂದನ್ನು ಪೋಸ್ಟ್ ಮಾಡಿರುವ ಅಖಿಲೇಶ್ ”ಇದು ದೇಶದ ಪ್ರಮುಖ ಸಂಸದೀಯ ಕ್ಷೇತ್ರದ ಸ್ಥಿತಿ, ಕಸದ ರಾಶಿಯೇ ರಸ್ತೆ ಎಂದರೆ ತಪ್ಪಾಗದು. ಇದೇನಾ ‘ಸ್ವಚ್ಛ ಭಾರತ’? ಬನಾರಸ್ ಜಪಾನ್ ನ ಕ್ಯೋಟೋ (ಸ್ವಚ್ಛ ನಗರ) ಆಗಲಿಲ್ಲ. ಆಶಾದಾಯಕವಾಗಿ, ಈ ಪೋಸ್ಟ್ ಪ್ರಕಟವಾದ ನಂತರ, ಈ ಸ್ಥಳವನ್ನು ನಾಳೆಯಿಂದ ಸ್ವಚ್ಛಗೊಳಿಸಲಾಗುತ್ತದೆ. ಬಿಜೆಪಿ ಸರಕಾರ ಕೆಲಸ ಮಾಡುವುದಿಲ್ಲ, ಪ್ರತಿಪಕ್ಷಗಳೇ ಕೆಲಸ ಮಾಡುತ್ತವೆ. ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ವಿಪಕ್ಷಗಳ ಬಳಿಗೆ ಬರುತ್ತಿರುವುದು ಇದೇ ಮೊದಲು” ಎಂದು ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ಈ ಹಿಂದಿನ ಭೇಟಿಯ ವೇಳೆ ವಾರಾಣಸಿ ನಗರವನ್ನು ಕ್ಯೋಟೋ ನಂತೆ ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದು ಹೇಳಿದ್ದಾರೆ.