ಮುಂಬಯಿ: ಕೆಲ ಕಾಲದಿಂದ ಸಿನಿ ರಂಗದಿಂದ ದೂರವಾಗಿರುವ ಬಾಲಿವುಡ್ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್(Urmila Matondkar )ಮದುವೆಯಾದ 8 ವರ್ಷಗಳ ಬಳಿಕ ಪತಿ ಮೊಹ್ಸಿನ್ ಅಖ್ತರ್ ಮಿರ್ ಅವರಿಂದ ವಿಚ್ಛೇದನಕ್ಕೆ(Divorce) ಅರ್ಜಿ ಸಲ್ಲಿಸುವ ಸುದ್ದಿ ಹೊರ ಬಿದ್ದಿದೆ.
ಅಂತರ್ ಧರ್ಮೀಯ ವಿವಾಹವಾಗಿದ್ದ ನಟಿಯ ವೈಯಕ್ತಿಕ ಜೀವನದ ಸುದ್ದಿ ಮುಖ್ಯಾಂಶವಾಗಿ ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ.

ರಂಗೀಲಾ, ಜುದಾಯಿ ಮತ್ತು ದೀವಾನೆ ಮುಂತಾದ ಹಿಟ್ ಚಿತ್ರಗಳ ಮೂಲಕ ಜನ ಮನ ಗೆದ್ದಿದ್ದ 50 ರ ಹರೆಯದ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಮೊಹ್ಸಿನ್ ಅವರೊಂದಿಗಿನ ಜೀವನದಿಂದ ದೂರವಾಗಲು ನಿರ್ಧರಿಸಿದ್ದಾರೆ. ಈಗಾಗಲೇ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಪ್ರತ್ಯೇಕತೆಯ ಹಿಂದಿನ ಕಾರಣ ಇನ್ನೂ ತಿಳಿದಿಲ್ಲವಾದರೂ, ವಿಚ್ಛೇದನವು ”ಪರಸ್ಪರ ಒಪ್ಪಿಗೆಯ ಮೇಲೆ ನಡೆಯುತ್ತಿಲ್ಲ” ಎಂದು ವರದಿಯಾಗಿದೆ.
ತನಗಿಂತ 10 ವರ್ಷ ಕಿರಿಯ ಕಾಶ್ಮೀರ ಮೂಲದ ನಟ ಮೊಹ್ಸಿನ್ ಅವರೊಂದಿಗೆ 2016 ಮಾರ್ಚ್ 3 ರಂದು ಊರ್ಮಿಳಾ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು.

ಮನೀಶ್ ಮಲ್ಹೋತ್ರಾ ಅವರ ಸೊಸೆಯ ವಿವಾಹ ಸಮಾರಂಭದಲ್ಲಿ ಮೊಹ್ಸಿನ್ ಮತ್ತು ಊರ್ಮಿಳಾ ಆತ್ಮೀಯವಾಗಿದ್ದರು. ಕೇವಲ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸರಳ ಆಚರಣೆಯಲ್ಲಿ ವಿವಾಹವಾಗಿದ್ದರು. ಮದುವೆಯು ಬಳಿಕ ಊರ್ಮಿಳಾ ಇಸ್ಲಾಂಗೆ ಮತಾಂತರ ಗೊಂಡಿದ್ದಾರೆ ಎಂದೂ ಸುದ್ದಿಯಾಗಿದ್ದರು. ಆದರೆ ಊಹಾಪೋಹಗಳನ್ನು ನಟಿ ತಳ್ಳಿ ಹಾಕಿದ್ದರು. ”ಇದೆಲ್ಲ ರಾಜಕೀಯ, ನಾನು ನನ್ನ ಹಿಂದೂ ಎಂಬ ಗುರುತನ್ನು ಹೆಮ್ಮೆ ಪಡುತ್ತೇನೆ’ಎಂದಿದ್ದರು.
Laxmi News 24×7