Breaking News

ಕಪ್ಪಗಿದ್ದಾಳೆ ಎಂದು ನಿಂದಿಸಿದ ಪತಿ, ಮನನೊಂದು ನೇಣಿಗೆ ಶರಣಾದ ನವವಿವಾಹಿತೆ!

Spread the love

ಚಿಕ್ಕಬಳ್ಳಾಪುರ : ಪತ್ನಿ ಕಪ್ಪಗಿದ್ದಾಳೆ ಎಂದು ನಿಂದಿಸಿದ್ದು ಅಲ್ಲದೆ, ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮನನೊಂದ ಪತ್ನಿ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಗಾಂಧಿನಗರದಲ್ಲಿ ನಡೆದಿದೆ.

BREAKING : ಚಿಕ್ಕಬಳ್ಳಾಪುರ : ಕಪ್ಪಗಿದ್ದಾಳೆ ಎಂದು ನಿಂದಿಸಿದ ಪತಿ, ಮನನೊಂದು ನೇಣಿಗೆ ಶರಣಾದ ನವವಿವಾಹಿತೆ!

ಬಿಂದುಶ್ರೀ (22) ಆತ್ಮಹತ್ಯೆ ಮಾಡಿಕೊಂಡವರು. ಗಾಂಧಿನಗರದ ನಿವಾಸಿ ಟೈಲರ್ ವೃತ್ತಿಯ ಕೆ.ಬಿ.ದೇವರಾಜು ಅವರಿಗೆ ಬಿಂದುಶ್ರೀ ಏಕೈಕ ಪುತ್ರಿ. ಇವರನ್ನು ಆವಲಹಳ್ಳಿ ಸಮೀಪದ ಹಿರಂಡಹಳ್ಳಿ ಗ್ರಾಮದ ಮುನಿರಾಜು ಎಂಬವರ ಮಗ ಎಚ್.ಎಂ.ರಾಘವೇಂದ್ರ ಅವರಿಗೆ ಕೊಟ್ಟು 2024ರ ಫೆಬ್ರವರಿ 21ರಂದು ಕೈವಾರದಲ್ಲಿ ಮದುವೆ ಮಾಡಲಾಗಿತ್ತು.

ಇದೀಗ ಬಿಂದುಶ್ರೀ ಪತಿ ರಾಘವೇಂದ್ರ, ಮಾವ ಎನ್ ಮುನಿರಾಜು, ಅತ್ತೆ ಲತಾ ಹಾಗೂ ನರಸಿಂಹಯ್ಯ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ಬಿಂದುಶ್ರೀಯನ್ನು ಅವಮಾನಿಸಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. 20 ಲಕ್ಷರೂಪಾಯಿ ಕೊಡುವಂತೆ ಕಿರುಕುಳ ನೀಡಿದ್ದಾರೆ.ಕಿರುಕುಳ ತಾಳದೆ ಬಿಂದುಶ್ರೀ ತವರು ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆರು ತಿಂಗಳ ಹಿಂದೆ ರಾಘವೇಂದ್ರ ಜೊತೆಗೆ ಬಿಂದುಶ್ರೀ ಮದುವೆಯಾಗಿತ್ತು.

ಮಗಳ ಸಾವಿನ ಸುದ್ದಿ ಕೇಳಿ ತಂದೆಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಮಗಳ ಆತ್ಮಹತ್ಯೆಯಿಂದ ತಾಯಿ ಅಘಾತಕ್ಕೆ ಒಳಗಾಗಿದ್ದಾರೆ. ಬಿಂದುಶ್ರೀ ತಂದೆ ಕೆವಿ ದೇವರಾಜ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಂತಾಮಣಿಯ ಗಾಂಧಿನಗರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಕೊಡಲೇ ಕೆಬಿ ದೇವರಾಜನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.


Spread the love

About Laxminews 24x7

Check Also

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

Spread the love ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ