ಕೊಣ್ಣೂರ:ಗೆಳೆಯರ ಜೊತೆ ನದಿಗೆ ಈಜಲು ಹೋಗಿ ನೀರು ಪಾಲಾದ ಘಟನೆ ಗೋಕಾಕ ತಾಲೂಕಿನ
9
ಕೊಣ್ಣೂರು ಗ್ರಾಮದಲ್ಲಿ ನಡೆದಿದೆ. ಫರೀದ್ ಅಸ್ಲಂ ಸೌ ದಾಗರ (೧೬) ಮೃತ ಯುವಕ. ಘಟಪ್ರಭಾ ನದಿಗೆ ಗೆಳೆಯರ ಜೊತೆ ಈಜಲು ಹೋಗಿದ್ದ. ಫರೀದ್ ಗೆ ಈಜು ಬರದೆ ನದಿ ದಡದಲ್ಲಿ ಕುಳಿತು ಸ್ನಾನ ಮಾಡುತ್ತಿದ್ದ ಇಂದು ನದಿಗೆ ನೀರು ಹೆಚ್ಚಿಗೆ ಇರುವುದರಿಂದ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಸುಳಿಯಲ್ಲಿ ಸಿಲುಕಿದ್ದ ನಂತರ ಸ್ಥಳೀಯರ ಸಹಾಯದಿಂದ ಯುವಕನನ್ನು ಹೊರತೆಗೆದಿದ್ದು

ಆಸ್ಪತ್ರೆಗೆ ಒಯ್ಯುವುದರೊಳಗೆ ಪ್ರಾಣ ಬಿಟ್ಟಿದ್ದ. ಈ ಘಟನೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Laxmi News 24×7