ದರ್ಶನ್ ವಿಚಾರಕ್ಕೆ ಪ್ರಭಾವಿ ಸಚಿವರಿಗೆ ಸಿಎಂ ತರಾಟೆ!
ಬೆಂಗಳೂರು ಆಗಸ್ಟ್ 30: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶದ್‌ಗೆ ರಾಜಾತಿಥ್ಯ ನೀಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಭಾವಿ ಸಚಿವರೊಬ್ಬರಿಗೆ ತರಾಟೆ ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಜೈಲಿನಲ್ಲಿ ದರ್ಶನ್‌ಗೆ ಐಶಾರಾಮಿ ವ್ಯವಸ್ಥೆ ನೀಡಿರುವುದರ ಹಿಂದೆ ಸಚಿವರೊಬ್ಬರ ಕೈವಾಡವಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.
ಅದಕ್ಕೆ ಸಿಎಂ ಗರಂ ಆಗಿದ್ದು, ಆ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
‘ನೋಡಪ್ಪ ಇಂತಹ ವಿಚಾರಕ್ಕೆ ಹೋಗಬೇಡ. ಸಚಿವ ನಾಗೇಂದ್ರನಿಗೆ ಏನಾಯ್ತು. ನಿನಗೂ ಅದೇ ರೀತಿ ಆದ್ರೆ ಏನ್ಮಾಡ್ತೀಯಾ? ಇದರ ಹಿಂದೆ ನಿನ್ನ ಪಾತ್ರ ಇದ್ದರೆ ನಾಗೇಂದ್ರ ಹೋದಂತೆ ನೀನು ಹೋಗಬಹುದು’ ಎಂದು ಸಿಎಂ ತರಾಟೆ ತೆಗೆದುಕೊಂಡಿದ್ದಾರೆ. ಸಿಎಂ ತರಾಟೆ ತೆಗೆದುಕೊಳ್ಳುತ್ತಿದ್ದಂತೆ, ‘ಸರ್ ಇದರಲ್ಲಿ ನನ್ನ ಪಾತ್ರ ಇಲ್ಲ. ನಾನಗೂ ಅದಕ್ಕೂ ಸಂಬಂಧವಿಲ್ಲ. ಯಾರೋ ಸುಮ್ಮನೆ ಗುಮಾನಿ ಹಬ್ಬಿಸಿದ್ದಾರೆ’ ಎಂದಿದ್ದಾರೆ ಎನ್ನಲಾಗಿದೆ.