Breaking News

ಅಕ್ಕ ಸಮ್ಮೇಳನಕ್ಕೆ ಅದ್ಧೂರಿ ಸಿದ್ಧತೆ

Spread the love

ಆ.28- ಅಮೇರಿಕಾದ ವರ್ಜೀನಿಯಾ ರಾಜ್ಯದ ರಿಚಂಡ್‌ ನಗರದಲ್ಲಿ ಇದೇ ಆ.30, 31 ಮತ್ತು ಸೆ.1 ರಂದು ನಡೆಯಲಿರುವ ಅಮೆರಿಕಾ ಕನ್ನಡ ಕೂಟಗಳ ಆಗರ (ಅಕ್ಕ) 2024ರ ಸಮೇಳನಕ್ಕೆ ಅದ್ಧೂರಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಮೇಳನದ ಅಧ್ಯಕ್ಷರಾದ ರವಿ ಬೋರೆಗೌಡ ಅವರು ತಿಳಿಸಿದ್ದಾರೆ.

 

ಅಮೇರಿಕಾದ 50ಕ್ಕೂ ಹೆಚ್ಚು ರಾಜ್ಯಗಳ ಕನ್ನಡ ಸಂಘಗಳು ಒಟ್ಟಾಗಿ ಸೇರಿ ಪ್ರತೀ ಎರಡು ವರ್ಷಗಳಿಗೊಮೆ ಈ ಸಮೇಳನವನ್ನು ಆಯೋಜಿಸುತ್ತವೆ. ಕೋವಿಡ್‌ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಮುಂದೂಡಲಾಗಿತ್ತು.

ಈ ವರ್ಷದ ಸಮೇಳನವು ಕನ್ನಡಿಗರಿಗೆ ಒಂದು ಸಂಭ್ರಮದ ಹಬ್ಬ ವಾಗಿದ್ದು, ಕನ್ನಡ ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಅಮೇರಿಕಾದ ಕನ್ನಡಿಗರಿಗೆ ಮತ್ತೊಮೆ ಸವಿಯುವಂತಹ ಒಂದು ಅಪೂರ್ವ ಅವಕಾಶವಾಗಿದೆ.ಈ ಸಮೇಳನಕ್ಕಾಗಿ 6 ರಿಂದ 8 ಸಾವಿರ ಕನ್ನಡಿಗರು ನೊಂದಾಯಿಸಿಕೊಂಡಿದ್ದು, ಮೂರು ದಿನಗಳ ಕಾಲ ಕನ್ನಡ ಡಿಂಡಿಮ ರಿಚಂಡ್‌ ನಗರದಲ್ಲಿ ಪ್ರತಿಧ್ವನಿಸಲಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ