Breaking News

ಒಂದೇ ವರ್ಷದಲ್ಲಿ 1.67 ಲಕ್ಷ ಮಂದಿ ಸಾವು,ಮೃತಪಟ್ಟವರಲ್ಲಿ ಬೈಕ್‌ ಸವಾರರೇ ಹೆಚ್ಚು

Spread the love

ಹುಬ್ಬಳ್ಳಿ, ಆಗಸ್ಟ್ 28: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ವ್ಯಾಪ್ತಿಯಲ್ಲಿ ಕಳೆದ ಒಂದೇ ವಾರದಲ್ಲಿ ಕೆಲವು ಕಡೆಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿದೆ. ಈ ಪೈಕಿ ಮೊನ್ನೆ ಹುಬ್ಬಳ್ಳಿ ಗ್ರಾಮೀಣದ ಅಪಘಾತ ನಾಲ್ಕು ಹಾಗೂ ಇಂದು ಬುಧವಾರ ಜರುಗಿದ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಆರು ಮಂದಿಯ ಸ್ಥಿತಿ ಚಿಂತಜನಕವಾಗಿದೆ. ರಸ್ತೆಗಳ ಅಪಘಾತಗಳ ಕಡಿಮೆ ಮಾಡುವ ಉದ್ದೇಶದಿಂದ ಫಿಲ್ಡ್‌ಗೆ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಇಳಿದಿದ್ದಾರೆ.

ಬುಧವಾರ ನವನಗರದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಕಚೇರಿ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಅವಳಿ ನಗರ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣಗಳು ಇನ್ನು ಕಡಿಮೆ ಆಗಬೇಕು ಎಂದು ಅವರು ಸಿಬ್ಬಂದಿಗೆ ಸೂಚಿಸಿದರು.

ಈಗಾಗಲೇ ಸುಗಮ ಸಂಚಾರ, ರಾತ್ರಿ ಸುರಕ್ಷತೆ ಬಗ್ಗೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದೇವೆ. 2023ಕ್ಕೆ ಹೋಲಿಕೆ ಮಾಡಿದರೆ, 2024ರ ಅವಧಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಅಪಘಾತಗಳ ಪ್ರಮಾಣ ಕಡಿಮೆಯಾಗುತ್ತಿದೆ. ಈ ಇಳಿಕೆ ಪ್ರಮಾಣ ಮತ್ತಷ್ಟು ಕಡಿಮೆ ಆಗಬೇಕು.

ಆಟೋ ಮೀಟರ್ ಅಳವಡಿಕೆ ಬಗ್ಗೆ ದೂರು

ಮೊನ್ನೆ ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಬೇರೆ ಕಡೆ ಸಹ ಅಪಘಾತಗಳು ಆಗುತ್ತಿವೆ. ಅದರ ಜೊತೆಗೆ, ನಗರದಲ್ಲಿ ಆಟೋಗಳಿಗೆ ಮೀಟರ್ ಅಳವಡಿಕೆ ಆಗಬೇಕು, ಇದರಲ್ಲಿ ಸಹ ಚಾಲಕರ ಬಗ್ಗೆ ದೂರಗಳು ಬರುತ್ತಿವೆ. ರಾಂಗ್ ಡ್ರೈವ್, ಡ್ರಿಂಕ್ ಆಯಂಡ್ ಡ್ರೈವ್ ಕುರಿತು ಸಹ ದೂರುಗಳು ಬರುತ್ತಿವೆ. ಈ ಕುರಿತು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದೇವೆ.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಸೋಷಿಯಲ್‌ ಮೀಡಿಯಾ ಜಾಗೃತಿ ಬರಹಗಳನ್ನು ಹಂಚಿಕೆ ಮಾಡಿ, ಸಾರ್ವಜನಿಕರಲ್ಲಿ ಜಾಗೃತಿ‌ ಮೂಡಿಸುತ್ತಿರುವುದು ಒಳ್ಳೆಯ ವಿಚಾರ. ಇನ್ನು ಚಲನ್ ಮೂಲಕ ದಂಡ ಸಂಗ್ರಹ ಸಹ ಉತ್ತಮವಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಟ್ರಾಫಿಕ್ ಸಮಸ್ಯೆ ಪರಿಹಾರ ಯಾವಾಗ?

ಹುಬ್ಬಳ್ಳಿ ಧಾರವಾಡ ಮಹಾನಗರ, ಧಾರವಾಡ ಜಿಲ್ಲೆಯಲ್ಲೂ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಏನೇನು ಮಾಡಬಹುದು ಎಂದು ಸಮಾಲೋಚಿಸಿದ್ದೇವೆ. ಬೇರೆ ಇಲಾಖೆ ಜೊತೆಯೂ ಚರ್ಚಿಸುತ್ತೇವೆ. ಅಪಘಾತವಾದಾಗ ಕಿಮ್ಸ್‌ಗೆ ಅನೇಕರು ಬರುತ್ತಾರೆ. ಈ ಕುರಿತು ಸಹ ಚರ್ಚೆಯಾಗಿದೆ ಎಂದರು.

ಈಗಾಗಲೇ ಕಟಿಂಗ್ ಆಗಿರುವ ರಸ್ತೆಯನ್ನು ಬೇರೆ ಇಲಾಖೆ ನಿರ್ವಹಿಸಬೇಕು. ಪಾಲಿಕೆ ರಸ್ತೆ ಕಾಮಗಾರಿ ನಡೆಸುವಾಗ ಪೊಲೀಸ್ ಇಲಾಖೆ ಜೊತೆ ಚರ್ಚಿಸಬೇಕು. ಜಲಮಂಡಳಿ ಮಂಡಳಿ, ಲೋಕೋಪಯೋಗಿ ಇಲಾಖೆಯಿಂದ ಸರಿಯಾಗಿ ಸಹಕಾರ ಸಿಗತ್ತಿಲ್ಲ. ಈ ಕುರಿತು ಸೂಕ್ತವಾಗಿ ಯೋಜನೆ ರೂಪಿಸಿ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲು ಅನುಕೂಲವಾಗುತ್ತದೆ. ಪೊಲೀಸ್ ಇಲಾಖೆಯನ್ನು ವಿಶ್ವಾಸಕ್ಕೆ ಪಡೆಯದೆ ಮಾಡುವುದರಿಂದ ಇಂತಹ ಸಮಸ್ಯೆಗಳು ಆಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಂದೇ ವರ್ಷದಲ್ಲಿ 1.67 ಲಕ್ಷ ಮಂದಿ ಸಾವು

ನಗರ ವ್ಯಾಪ್ತಿಯಲ್ಲಿ ಅಪಘಾತಗಳು ಹೆಚ್ಚಾಗಿವೆ. ಇಡೀ ದೇಶದಲ್ಲಿ ಅಪಘಾತ ಪ್ರಕರಣ ಹೆಚ್ಚಾಗಿದ್ದು 2022 ರಲ್ಲಿ 1.67 ಲಕ್ಷ ಮಂದಿ ಸಾವನ್ನಪ್ದಿದ್ದು 2023ರಲ್ಲಿ ಪ್ರತಿದಿನ ಕರ್ನಾಟಕ ರಾಜ್ಯದಲ್ಲಿ ಮೃತಪಟ್ಟಿದ್ದಾರೆ. ಅದಕ್ಕೆ ಎಲ್ಲರ ಹೊಣೆಗಾರರು ಸಹ ಆಗಿದ್ದಾರೆ.

ಓವರ್ ಸ್ಪೀಡ್, ರಾಂಗ್ ಸೈಡ್ ಡ್ರೈವ್ ಮಾಡುವುದರಿಂದ ಆಗುತ್ತಿದೆ. ಸಾಕಷ್ಟು ಮುಂಜಾಗ್ರತಾ ಕ್ರಮ ನಾವು ಕ್ರಮಗೊಂಡಿದ್ದೇವೆ. ಇದರಲ್ಲಿ ಬ್ಲ್ಯಾಕ್ ಸ್ಪಾಟ್ ಕಂಡು ಹಿಡಿದಿದ್ದು ಅಪಘಾತಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಇಳಿಮುಖವಾಗಿವೆ‌. ಯಾವುದೇ ಕಾರಣಕ್ಕೋ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಬೇಡ. ಗಾಡಿ ಓಡಿಸಲು ಬರದೆ ಹೆಲ್ಮೆಟ್ ಹಾಕದೆ ಓಡಿಸುತ್ತಾರೆ. ಝೀರೋ ಆಗೋವರೆಗೂ ನಮ್ಮ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಮೃತಪಟ್ಟವರಲ್ಲಿ ಬೈಕ್‌ ಸವಾರರೇ ಹೆಚ್ಚು

ಒಟ್ಟು ಅಪಘಾತಗಳಲ್ಲಿ ಮೃತಪಟ್ಟವರ ಪೈಕಿ ಶೇಕಡಾ 60ರಷ್ಟು ಮಂದಿ ಬೈಕ್‌ ಸವಾರರೇ ಆಗಿದ್ದಾರೆ. 25 ಪಾದಚಾರಿಗಳು ಸಾಯುತ್ತಿದ್ದಾರೆ. ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲ ಸಮಸ್ಯೆ ಗೆ ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲ. ಗೂಡ್ಸ್ ವಾಹನದಲ್ಲಿ ಜನರನ್ನು ತುಂಬಿಸಿಕೊಂಡರೆ, ನಿಯಮ ಬಾಹಿರವಾಗುತ್ತದೆ. ಅಂತವರ ಪರ್ಮಿಟ್ ಅನ್ನು ರದ್ದಗೊಳಿಸಲಾಗುವುದು ಎಂದು ತಿಳಿಸಿದರು.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ