ಅಕ್ಟೋಬರ್ 23, 24 ಹಾಗೂ 25 ರಂದು ಜರುಗಲಿರುವ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಕಿತ್ತೂರು ಚನ್ನಮ್ಮಾಜಿಯ ಉತ್ಸವ 2024 ರ ಪೂರ್ವಭಾವಿ ಸಭೆ ಸೋಮವಾರ ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆಸಲಾಯಿತು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕಂದಾಯ ಸಚಿವ ಕೃಷ್ಣಭೈರೆಗೌಡ ಸಭೆಯಲ್ಲಿ ಈ ಬಾರಿ 200 ನೇ ಅದ್ಧೂರಿ ಕಿತ್ತೂರು ಉತ್ಸವಕ್ಕೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ 5 ಕೋಟಿ ಅನುದಾನ ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಶಾಸಕ ಬಾಬಾಸಾಹೇಬ ಪಾಟೀಲ ಕೋರಿಕೆಯಂತೆ 200 ನೇ ವರ್ಷದ ಸಂಭ್ರಮಾಚರನೆ ನಿಮಿತ್ಯ ಪಟ್ಟಣದಲ್ಲಿ ಚನ್ನಮ್ಮಾಜಿಯ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಗೆ 35 ಕೋಟಿ, ಚನ್ನಮ್ಮನ ಕೋಟೆ ಆವರಣದಲ್ಲಿರುವ 7 ಎಕರೆ ಜಾಗದಲ್ಲಿ ಭವ್ಯವಾದ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಸೂಚಿಸಿ ಅನುಮೋದನೆ ನೀಡಿದರು. ಒಟ್ಟಾರೆ ರೂ. 40.00 ಕೋಟಿ ಕಾಮಗಾರಿಗೆ ಅನುಮೋದನೆ ನೀಡಿ ಅನುದಾನ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಉಸ್ತುವಾರಿ ಸಚಿವರು ಸತೀಶ ಜಾರಕಿಹೊಳಿ, ಶಾಸಕ ಬಾಬಾಸಾಹೇಬ ಪಾಟೀಲ, ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕಿರಪುರ, ಸಂತೋಷ್ ಹಾನಗಲ್, ಕ್ಯೂರೇಟರ್ ರಾಘವೇಂದ್ರ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.