ಕೊಪ್ಪಳ: ತುಂಗಭದ್ರಾ ಜಲಾಶಯದ ಮುರಿದು ಬಿದ್ದ 19ನೇ ಕ್ರೆಸ್ಟ್ ಗೇಟ್‌ಗೆ ತಾತ್ಕಾಲಿಕ ಗೇಟ್ ಅಳವಡಿಕೆ ಸಾಹಸ ಕಾರ್ಯ ಕೈ ಹಿಡಿದಿದ್ದು, ಶುಕ್ರವಾರ ರಾತ್ರಿ ಐದು ಸ್ಟಾಪ್ ಲಾಗ್‌ಗಳ ಪೈಕಿ ಒಂದನ್ನು ಯಶಸ್ವಿಯಾಗಿ ಇಳಿಸಲಾಗಿದೆ.
ತಜ್ಞರ ತಂಡಕ್ಕೆ ಯಶಸ್ಸಿನ ಮೊದಲ ಮೆಟ್ಟಿಲು ಲಭಿಸಿದ್ದು, ಆತ್ಮವಿಶ್ವಾಸ ಹೆಚ್ಚಿಸಿದೆ.
ಇನ್ನುಳಿದ 4 ಸ್ಟಾಪ್ ಲಾಗ್ ಇಳಿಸುವ ಕಾರ್ಯ ಶನಿವಾರ ಸಂಜೆಗೆ ಬಹುತೇಕ ಪೂರ್ಣಗೊಳ್ಳಲಿದೆ.
ಶುಕ್ರವಾರ ಬೆಳಗ್ಗೆಯಿಂದ ತಾತ್ಕಾಲಿಕ ಗೇಟ್ ಅಳವಡಿಕೆಗೆ ಜಲಾಶಯದಲ್ಲಿ ಅಡ್ಡಿ ಮಾಡುತ್ತಿದ್ದ ಸ್ಕೈವಾಕ್ ಹಾಗೂ ಗೇಟ್ ನಿರ್ವಹಣೆ ಮಾಡುವ ಕಬ್ಬಿಣದ ಬೀಮ್‌ಗಳನ್ನು ಕ್ರೇನ್ ಸಹಾಯದಿಂದ ತೆರವು ಮಾಡಲಾಯಿತು. ಸಂಜೆ ವೇಳೆ ತಾತ್ಕಾಲಿಕ ಗೇಟ್ ಅಳವಡಿಕೆಗೆ ತಜ್ಞರು ಸಿದ್ಧತೆ ನಡೆಸಿದರು.
ರಾತ್ರಿ ಸಚಿವ ಶಿವರಾಜ ತಂಗಡಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗೇಟ್ ಅಳವಡಿಕೆ ಆರಂಭಿಸಲಾಯಿತು.