ಸಕ್ಕರೆ ನಾಡಿನಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ; ಆಲೆಮನೆ ಬಳಿಕ ತೋಟದ ಮನೆಯಲ್ಲೂ ಕೃತ್ಯ!
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಹೆಣ್ಣು ಭ್ರೂಣ ಪತ್ತೆ (Female Foeticide Racket) ಹಾಗೂ ಹತ್ಯೆ ದಂಧೆಯನ್ನು ಅಧಿಕಾರಿಗಳು ಬೇಧಿಸಿದ್ದಾರೆ. ಮಾವಿನಕೆರೆಯ ಆಲೆಮನೆ, ಹೆಲ್ತ್ ಕ್ವಾರ್ಟಸ್ ಬಳಿ ತೋಟದ ಮನೆಯಲ್ಲಿ (Farmhouse) ಭ್ರೂಣ ಲಿಂಗ ಪತ್ತೆ ಮಾಡ್ತಿದ್ದಾಗಲೇ ದಾಳಿ ಮಾಡಿದ ಡಿಹೆಚ್‌ಒ ಡಾ.
ಮೋಹನ್ ನೇತೃತ್ವದ ತಂಡ ಮೂವರನ್ನು ಬಂಧಿಸಿದ್ದಾರೆ. ಸ್ಕ್ಯಾನಿಂಗ್ (Scanning) ಮಾಡ್ತಿದ್ದ ಪ್ರಮುಖ ಆರೋಪಿ ಅಭಿಷೇಕ್ ಎಸ್ಕೇಪ್ ಆಗಿದ್ದಾನೆ. ಗರ್ಭಿಣಿಯ ಪತಿಯನ್ನೂ (Husband) ಕೂಡ ಬಂಧಿಸಲಾಗಿದೆ.
ಮಂಡ್ಯದ ನಾಗಮಂಗಲದ ಮಾವಿನಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ತಡರಾತ್ರಿ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಡಿಹೆಚ್‌ಓ ಡಾ.ಮೋಹನ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಅಬಾರ್ಷನ್ ಕಿಟ್, ಸ್ಕ್ಯಾನಿಂಗ್ ಮಿಷನ್ ಪತ್ತೆಯಾಗಿದೆ.
ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮನೆಯ ಮಾಲೀಕ ಧನಂಜಯ್, ಖಾಸಗಿ ಆಸ್ಪತ್ರೆಯ ಗ್ರೂಪ್ ಡಿ ನೌಕರೆ, ಗರ್ಭಿಣಿಯ ಪತಿ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಪಡೆದುಕೊಂಡು ವಾಚ್ ಮಾಡಿ ನಿನ್ನೆ ಹಾಸನ ಮೂಲದ ಗರ್ಭಿಣಿಯನ್ನು ಕರೆತಂದು ಭ್ರೂಣ ಪತ್ತೆಗೆ ಮುಂದಾದ ವೇಳೆಯೇ ದಾಳಿ ಮಾಡಲಾಗಿದೆ.
ಕಳೆದ ಕೆಲ ಸಮಯದ ಹಿಂದಷ್ಟೇ ಮಂಡ್ಯದ ಆಲೆಮನೆ ಹಾಗೂ ಹೆಲ್ತ್ ಕ್ವಾಟ್ರಸ್ ನಲ್ಲಿ ಹೆಣ್ಣು ಭ್ರೂಣ ಹತ್ಯೆ ದಂಧೆ ನಡೆಯುತ್ತಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಈ ವೇಳೆ ಸರ್ಕಾರ ಕಠಿಣ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೆ ಭ್ರೂಣ ಹತ್ಯೆ ದಂಧೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.