Breaking News

ಮುಂದುವರಿದ ತನಿಖೆ, ಮಹತ್ವದ ‌ಮಾಹಿತಿ‌ ಪಡೆದ ಸಿಐಡಿ

Spread the love

ಯಾದಗಿರಿ: ನಗರ ಠಾಣೆ ಪಿಎಸ್‌ಐ ಪರಶುರಾಮ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಿಐಡಿ ತಂಡವು ನಗರದ ಡಿವೈಎಸ್‌ಪಿ ಕಚೇರಿಗೆ ಆಗಮಿಸಿ ಪರಶುರಾಮ್ ಅವರ ತಂದೆ ಜನಕಮುನಿ, ಸಹೋದರ ಹಣಮಂತ, ಮಾವ ವೆಂಕಟಸ್ವಾಮಿ ಅವರಿಂದ ಹೇಳಿಕೆ ಪಡೆಯಿತು.

ನಂತರ ಪೊಲೀಸ್‌ ಇಲಾಖೆಯ ವಸತಿ ಗೃಹದಲ್ಲಿರುವ ಮೃತ ಪರಶುರಾಮ್ ಅವರ ಮನೆಗೆ ತೆರಳಿದರು.

ಸ್ಥಳ ಮಹಜರು ನಡೆಸಿದರು.

ಸ್ಥಳ ಮಹಜರು ನಡೆಸಿ ಮೃತ ಪಿಎಸ್‌ಐ ಪರಶುರಾಮ್ ಕುಟುಂಬಸ್ಥರಿಂದ ಸಿಐಡಿ ತಂಡ ಮಾಹಿತಿ ಪಡೆದರು. ಅಲ್ಲದೇ ಸಿಐಡಿ ಎಸ್ಪಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ಬಳಿ ಮಾಹಿತಿ ಪಡೆದರು.

ಮಹತ್ವದ ‌ಮಾಹಿತಿ‌ ಪಡೆದ ಸಿಐಡಿ:

ಸಿಐಡಿ ತಂಡ ಡಿವೈಎಸ್ಪಿ ಕಚೇರಿಯಲ್ಲಿ ಪ್ರಿಂಟರ್, ಲ್ಯಾಪ್ ಟಾಪ್ ಮತ್ತು ಹ್ಯಾಂಡ್ ಕ್ಯಾಮೆರಾ ವಶಕ್ಕೆ ಪಡೆದರು. ಮಹತ್ವದ ದಾಖಲೆಗಳೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯತ್ತ ತೆರಳಿತು.

ಪಿಎಸ್‌ಐ ಪರಶುರಾಮ್‌ ನಿವಾಸದಲ್ಲಿ ಸಿಕ್ಕ ದಾಖಲೆಗಳನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಪರಶುರಾಮ್‌ ಮೃತಪಟ್ಟ ಸ್ಥಳದಲ್ಲಿ ಬಿದ್ದಿರುವ ರಕ್ತ, ಬಟ್ಟೆ, ಪರಶುರಾಮ್‌ ಉಪಯೋಗಿಸುತ್ತಿದ್ದ ಗನ್, ಸಾವಿಗೂ ಮುನ್ನ ಅಡುಗೆ‌ ಮಾಡಿರುವ ಅಕ್ಕಿ ಸ್ಯಾಂಪಲ್ ಎಫ್‌ಎಸ್‌ಎಲ್ ರವಾನೆ ಮಾಡಲಾಗಿದೆ.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ