ಮುಧೋಳ : ಕಳೆದು ಹದಿನೈದು ದಿನಗಳಿಂದ ಘಟಪ್ರಭಾ ನೀರಿನಿಂದ ಜಲಾವೃತಗೊಂಡಿದ್ದ ಯಾದವಾಡ ಸೇತುವೆ ಗುರುವಾರ (ಆಗಸ್ಟ್ 8) ಬೆಳಗ್ಗೆ ನೀರಿನಿಂದ ಮುಕ್ತವಾಗಿದೆ.
ಸೇತುವೆ ಮೇಲೆ ನೀರು ಇಳಿಮುಖವಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಬೈಕ್ ಹೊರತುಪಡಿಸಿ ಮತ್ಯಾವ ವಾಹನಗಳಿಗೂ ಅವಕಾಶ ಕಲ್ಪಿಸಲಾಗಿಲ್ಲ.
ಇನ್ನು ಕೆಲದಿನಗಳ ಬಳಿಕ ಸೇತುವೆ ಸ್ಥಿತಿಗತಿ ಅರಿತು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.