ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿರುವನಟ ದರ್ಶನ್(Actor Darshan) ಹಾಗೂ ಆತನ ಗ್ಯಾಂಗ್ ನ್ಯಾಯಾಂಗ ಬಂಧನದಲ್ಲಿದೆ. ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿಬರುತ್ತಿದ್ದಕ್ಕೆ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಎಸ್.
ಗಿರೀಶ್ ಹಾಗೂ ವಿಜಯನಗರದ ಎಸಿಪಿ ಚಂದನ್ ಕುಮಾರ್ ಕಾರ್ಯಪ್ರವೃತ್ತರಾಗಿದ್ದರು. ಜೂನ್ 11ರಂದು ಬೆಳಗ್ಗೆ ಮೈಸೂರಿನಲ್ಲಿ ಎಸಿಪಿ ಚಂದನ್, ನಟ ದರ್ಶನ್‌ನನ್ನು ವಶಕ್ಕೆ ಪಡೆದರು.ಎಸಿಪಿ ಚಂದನ್ ಕಾರ್ಯದಕ್ಷತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ನಟ ದರ್ಶನ್ ಅಭಿಮಾನಿಗಳು ಮಾತ್ರ ಅವರನ್ನು ಟಾರ್ಗೆಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಜೂನ್ 11ರಂದು ಬೆಳಗ್ಗೆ ಮೈಸೂರಿನಲ್ಲಿ ಎಸಿಪಿ ಚಂದನ್, ನಟ ದರ್ಶನ್‌ನನ್ನು ವಶಕ್ಕೆ ಪಡೆದರು.ಆರೋಪಿ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಂಡು, ಬೆಂಗಳೂರಿಗೆ ಕರೆತಂದಿದ್ದ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಅವರು ಮತ್ತೆ ತನಿಖಾ ತಂಡವನ್ನು ಸೇರಿಕೊಂಡಿದ್ದು, ತನಿಖೆಗೆ ಬಲ ಬಂದಂತಾಗಿತ್ತು. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲಾ 17 ಜನ ಆರೋಪಿಗಳು ಇದೀಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಮುಂದಾಗಿದ್ದಾರೆ.
Friends ಅಣ್ಣ ಯಾರು Anta ಗೊತ್ತಾಯ್ತ 🫵🤣#DBoss Sir Birthday ಗೂ ಅವನೇ ಸೆಕ್ಯೂರಿಟಿ ಆಗಿದ್ದ🙆♂️🤡
ಇವಾಗ #DBoss Sir ಜೈಲಿಂದ release ಆಗಬೇಕಾದ್ರೆ Ivane ಸೆಕ್ಯೂರಿಟಿ ಆಗಿರ್ತಾನೆ 🔥😍
Huli ಅಂತೆ Huli😝 ಈ ಹುಲಿಗೆ ಹೆಬ್ಬುಲಿ #DBoss Sir🔥🥵#DBoss #BossOfSandalwood #DevilTheHero #DBoss𓃰 pic.twitter.com/65R5uk1tZ8
— 😎ದಾಸ😎 (@harish213298505) August 2, 2024
ಈ ವರ್ಷ ನಟ ದರ್ಶನ್ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಎಸಿಪಿ ಚಂದನ್ ಸಹ ಅಲ್ಲಿಗೆ ಹೋಗಿದ್ದರು. ನಟ ದರ್ಶನ್ ಕೈ ಕುಲುಕಿ ಶುಭ ಕೋರಿದ್ದರು. ಈ ವೀಡಿಯೋವನ್ನು ಕೆಲವರು ವೈರಲ್ ಮಾಡಿ `ಹುಲಿ ಅಂತೆ ಹುಲಿ, ಈ ಹುಲಿಗೆ ಹೆಬ್ಬುಲಿ ಡಿ ಬಾಸ್’ ಎಂದು ಹಾಕಿದ್ದಾರೆ.ದರ್ಶನ್ ಸರ್ ಬರ್ತ್‌ಡೇಗೂ ಅವನೇ ಸೆಕ್ಯೂರಿಟಿ ಆಗಿದ್ದ, ಇವಾಗ ಡಿಬಾಸ್ ಜೈಲಿಂದ ರಿಲೀಸ್ ಆಗಬೇಕಾದ್ರೆ ಇವನೇ ಸೆಕ್ಯೂರಿಟಿ ಆಗಿರ್ತಾನೆ ಅಂತೆಲ್ಲಾ ಬರೆದು ವೈರಲ್ ಮಾಡುತ್ತಿದ್ದಾರೆ.