ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್‌ಗೆ (Akshay Kumar) ಅರಗಿಸಿಕೊಳ್ಳಲಾಗದ ಸಂಕಟ ಎದುರಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡ ಅವರ ಹಲವು ಸಿನಿಮಾಗಳು ಫ್ಲಾಪ್ ಆಗಿದ್ದು, ಸದ್ಯ ಅವರ ಅಭಿಮಾನಿಗಳು ಅಕ್ಷಯ್‌ಗೆ ಸ್ವಾಂತನ ಹೇಳಿ “ಕಂ ಬ್ಯಾಕ್’ ಮಾಡಲು ಪ್ರೇರೆಪಿಸುತ್ತಿದ್ದಾರೆ.
ಆದರೆ, ಅಕ್ಷಯ್ ಮಾತ್ರ ಇದಕ್ಕೆ ಗರಂ ಆಗಿದ್ದು, ಫ್ಯಾನ್ಸ್‌ಗೆ, “ನಾನು ಸೋತಿದ್ದೇನೆ, ಸತ್ತಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.
ಸೋಲಿನ ಸುಳಿವಿನಲ್ಲಿ ಸಿಲುಕಿರುವ ಅಕ್ಷಯ್‌ಗೆ ಅಭಿಮಾನಿಗಳು ಸಂತಾಪ ಸೂಚಿಸಿದ್ದು, “ಸೋಲಿನ ಬಗ್ಗೆ ನಾನು ಹೆಚ್ಚು ಯೋಚಿಸಲ್ಲ. 4-5 ಸಿನಿಮಾ ಓಡಲಿಲ್ಲ ಎಂದ ಮಾತ್ರಕ್ಕೆ ನಾನು ಸತ್ತೇ ಹೋದ ರೀತಿ ಸಂತಾಪ ಕಳಿಸುತ್ತಿದ್ದಾರೆ. ಕಂ ಬ್ಯಾಕ್ ಮಾಡಲೂ ನಾನು ಎಲ್ಲಿಗೂ ಹೋಗಿಲ್ಲ. ಇಲ್ಲೆ ಇರುವೆ. ನಾನು ಕಷ್ಟಪಟ್ಟು ಸಂಪಾದಿಸುತ್ತಿದ್ದೇನೆ ಹೊರತು, ಯಾರ ಬಳಿಯೂ ಬೇಡಿ ಬದುಕುತ್ತಿಲ್ಲ’ ಎಂದು ಖಾರವಾಗಿ ಉತ್ತರಿಸಿದ್ದಾರೆ.
ಇತ್ತೀಚೆಗೆ ತೆರೆಕಂಡ ಅಕ್ಷಯ್ ಕುಮಾರ್ ಅವರ ಹಲವು ಚಿತ್ರಗಳು ನೆಲಕಚ್ಚಿವೆ. ಸೆಲ್ಫಿ, ಓ ಮೈ ಗಾಡ್ 2, ಮಿಶನ್ ರಾಣಿಗಂಜ್, ಬಡೆ ಮಿಯಾನ್ ಚೋಟೆ ಮಿಯಾನ್ ಮತ್ತು ಕೆಲ ವಾರಗಳ ಹಿಂದೆ ಬಂದ ಸರ್ಫಿರಾ ಚಿತ್ರಗಳು ದೊಡ್ಡ ಸದ್ದು ಮಾಡುವಲ್ಲಿ ಸೋತಿದೆ.