Breaking News

ಯಮಕನಮರಡಿ | ಶಿರೂರ ಜಲಾಶಯದಿಂದ 3,500 ಕ್ಯುಸೆಕ್ ನೀರು ಬಿಡುಗಡೆ

Spread the love

ಮಕನಮರಡಿ: ಹುಕ್ಕೇರಿ ತಾಲ್ಲೂಕಿನ ಶಿರೂರ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಭಾನುವಾರ ಎರಡು ಕ್ರಸ್ಟ್‌ಗೇಟ್‌ ತೆರೆದು 3,500 ಕ್ಯುಸೆಕ್ ನೀರು ಬಿಡುಗಡೆಗೊಳಿಸಲಾಯಿತು.

ಇದಕ್ಕೂ ಮುನ್ನ ಪೂಜೆ ಸಲ್ಲಿಸಿದ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಿಕ, ‘ಜಲಾಶಯ ಭರ್ತಿಗೆ ಎರಡು ಅಡಿಯಷ್ಟೇ ಬಾಕಿ ಇದೆ.

ಯಮಕನಮರಡಿ | ಶಿರೂರ ಜಲಾಶಯದಿಂದ 3,500 ಕ್ಯುಸೆಕ್ ನೀರು ಬಿಡುಗಡೆ

ಮತ್ತೊಂದೆಡೆ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಬೆಳಗಾವಿ ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯದಿಂದಲೂ 4,500 ಕ್ಯುಸೆಕ್‌ ನೀರು ಬಿಡಲಾಗಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಎರಡು ಕ್ರಸ್ಟ್‌ಗೇಟ್‌ ತೆರೆದು ನೀರು ಬಿಟ್ಟಿದ್ದೇವೆ. ಕರಗುಪ್ಪಿ, ಬಗರನಾಳ, ಪಾಶ್ಚಾಪುರ ಗ್ರಾಮಸ್ಥರು ನದಿದಡಕ್ಕೆ ಹೋಗಬಾರದು’ ಎಂದು ಮನವಿ ಮಾಡಿದರು.

‘ಅಗತ್ಯಬಿದ್ದರೆ ನದಿದಡದ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು’ ಎಂದು ತಿಳಿಸಿದರು.

ಹುಕ್ಕೇರಿ ತಹಶೀಲ್ದಾರ್‌ ಮಂಜುಳಾ ನಾಯಿಕ, ಹಿಡಕಲ್ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್.ಕೆ.ಎಂಟೆತ್ತೆನವರ, ಶರಣಪ್ಪ ಕಡದಿನ್ನಿ, ಸಂಜಯ ಸಿದ್ದಗೌಡರ, ಭೀಮಶಿ ಕಳ್ಳಿಮನಿ, ಲಗಮಣ್ಣ ಗುರವ ಇದ್ದರು.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ