Breaking News

X ನಲ್ಲಿ 100 ಮಿಲಿಯನ್ ಫಾಲೋವರ್‌ಗಳ ಗಡಿ ದಾಟಿದ ಮೋದಿ! ಟಾಪ್ 10ರಲ್ಲಿ ಯಾರಾರು?

Spread the love

ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ‘ಎಕ್ಸ್‌’ (ಟ್ವಿಟರ್‌) ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಫಾಲೋವರ್‌ಗಳ ಸಂಖ್ಯೆ 100 ಮಿಲಿಯನ್ (10 ಕೋಟಿ) ಗಡಿ ದಾಟಿದೆ.

ಕೇಂದ್ರ ಸಚಿವರು, ಬಿಜೆಪಿ ನಾಯಕರು, ಕಾರ್ಯಕರ್ತರು, ಅನೇಕ ಗಣ್ಯರು, ಅಭಿಮಾನಿಗಳು ಮೋದಿ ಅವರ ಈ ಸಾಧನೆಯನ್ನು ಕೊಂಡಾಡಿದ್ದಾರೆ.

ಅಲ್ಲದೇ ಅನೇಕ ಸಾಮಾಜಿಕ ತಾಣಗಳಲ್ಲಿ ನೂರು ಮಿಲಿಯನ್ ಗಡಿ ದಾಟಿದ್ದರ ಸ್ಕ್ರೀನ್ ಶಾಟ್ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಈ ಬಗ್ಗೆ ಮೋದಿ ಅವರೂ ಸಹ ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ.

ಈ ಮೂಲಕ ಮೋದಿ ಅವರು ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದವರಲ್ಲಿ ಜಾಗತಿಕವಾಗಿ ಏಳನೇ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ಅವರೇ ನಂಬರ್ 1. ವಿಶೇಷವೆಂದರೆ ಭಾರತದ ಪ್ರಧಾನಿ ಕಚೇರಿ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವುದರಲ್ಲಿ ಜಾಗತಿಕವಾಗಿ 23 ನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ 19 ನೇ ಸ್ಥಾನದಲ್ಲಿದ್ದಾರೆ.

ಜಾಗತಿಕವಾಗಿ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಗಣ್ಯರು

ಎಲಾನ್ ಮಸ್ಕ್ 188 ಮಿಲಿಯನ್

ಬರಾಕ್ ಒಬಾಮಾ 131ಮಿಲಿಯನ್

ಕ್ರಿಸ್ಟಿಯಾನೊ ರೊನಾಲ್ಡೊ 112 ಮಿಲಿಯನ್

ಜಸ್ಟಿನ್ ಬೀಬರ್ 110 ಮಿಲಿಯನ್

ರಿಹಾನಾ 108 ಮಿಲಿಯನ್

ಕೇಟ್ ಪೆರ್ರಿ 106 ಮಿಲಿಯನ್

ನರೇಂದ್ರ ಮೋದಿ 100 ಮಿಲಿಯನ್

ಟೇಲರ್ ಸ್ವಿಫ್ಟ್ 95 ಮಿಲಿಯನ್

ಡೋನಾಲ್ಡ್ ಟ್ರಂಪ್ 87 ಮಿಲಿಯನ್

ಲೇಡಿ ಗಾಗಾ 83 ಮಿಲಿಯನ್


Spread the love

About Laxminews 24x7

Check Also

ರಾಜ್ಯೋತ್ಸವ ಮೆರವಣಿಗೆ ವೇಳೆ ಪೊಲೀಸರಿಂದ‌ ಲಾಠಿ ಏಟು.

Spread the love ರಾಜ್ಯೋತ್ಸವ ಮೆರವಣಿಗೆ ವೇಳೆ ಪೊಲೀಸರಿಂದ‌ ಲಾಠಿ ಏಟು. ತಲೆ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದು ಬಿಮ್ಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ