ಮಳೆ.. ಮಳೆ.. ಕರ್ನಾಟಕದಲ್ಲಿ ಭರ್ಜರಿ ಮುಂಗಾರು ಮಳೆ ಬೀಳುತ್ತಿರುವ ಕಾರಣಕ್ಕೆ ಈಗ ಜಲಾಶಯಗಳ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ನದಿಗಳು ಹುಟ್ಟುವ ಘಟ್ಟ ಪ್ರದೇಶಗಳಲ್ಲಿ ಅಂದ್ರೆ ಮಲೆನಾಡು ಭಾಗದಲ್ಲಿ ಭಾರಿ ಮಳೆಯು ಬೀಳುತ್ತಿದೆ. ಕಳೆದ 2 ವಾರಗಳಿಂದ ನಿರಂತರವಾಗಿ ಇದೇ ರೀತಿ ಮಳೆ ಬಿದ್ದ ಕಾರಣ ಈಗ ಕರ್ನಾಟಕದ ಡ್ಯಾಂಗಳ ಪರಿಸ್ಥಿತಿ ಹೇಗಿದೆ ಗೊತ್ತಾ?
ಕೆಆರ್‌ಎಸ್ ಡ್ಯಾಂ ತುಂಬಲು ಇನ್ನು ಎಷ್ಟು ಅಡಿ ನೀರು ಬೇಕು? ಉಳಿದ ಡ್ಯಾಂಗಳ ಪರಿಸ್ಥಿತಿ ಏನು? ಮುಂದೆ ಓದಿ.
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಈ ಬಾರಿ ಉತ್ತಮವಾಗಿ ಮಳೆ ಬೀಳುತ್ತಿದೆ. ಮಲೆನಾಡು ಪ್ರದೇಶ ಮಾತ್ರವಲ್ಲ, ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಭಾರಿ ಭರ್ಜರಿ ಮಳೆ ಆಗುತ್ತಿದೆ. ಹೀಗಿದ್ದಾಗ ಕರಾವಳಿ ಜಿಲ್ಲೆಗಳು & ಮಲೆನಾಡು ಜಿಲ್ಲೆಗಳಲ್ಲಿ ಜನರು ಮಳೆ ನಿಂತರೆ ಸಾಕಪ್ಪಾ ಅಂತಾ ಕಾಯುತ್ತಿದ್ದರು. ಹೀಗಿದ್ದಾಗಲೇ ನಿನ್ನೆ ಮಳೆ ಅಬ್ಬರ ಒಂದಷ್ಟು ಕಡಿಮೆ ಆಗಿತ್ತು. ಆದರೆ ಮುಂದಿನ 48 ಗಂಟೆ ಕಾಲ ಮತ್ತೆ ಮುಂಗಾರು ಮಳೆಯು ಅಬ್ಬರಿಸಿ ಬೊಬ್ಬಿರುವುದು ಗ್ಯಾರಂಟಿ ಆಗಿದೆ. ಹೀಗಿದ್ದಾಗ ಕರ್ನಾಟಕದ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಗಾದ್ರೆ ಕೆಆರ್‌ಎಸ್ & ಆಲಮಟ್ಟಿ ಸೇರಿ ಯಾವ ಯಾವ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ? ಮುಂದೆ ಓದಿ.
ಕೆಆರ್‌ಎಸ್ ಜಲಾಶಯ ಫುಲ್?
ಕೆಆರ್‌ಎಸ್ ಜಲಾಶಯದಲ್ಲಿ ಒಟ್ಟು 49.45 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇದ್ದು, ಈಗ 25.59 ಅಡಿ ನೀರು ಇದೆ. ಕಳೆದ ವರ್ಷ ಇದೇ ಸಮಯಕ್ಕೆ ಕೇವಲ 12.92 ಟಿಎಂಸಿ ಅಡಿ ನೀರು ಇತ್ತು. 6,600 ಕ್ಯುಸೆಕ್ ನೀರು ಕೆಆರ್‌ಎಸ್ ಡ್ಯಾಂಗೆ ಹರಿದು ಬರ್ತಿದೆ. ಅಲ್ಲದೆ ಕಾವೇರಿ ಕೊಳ್ಳದಲ್ಲಿ ಮತ್ತಷ್ಟು ಉತ್ತಮ ಮಳೆಯ ನಿರೀಕ್ಷೆ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನೀರು ಹರಿದು ಬರುವ ಸಾಧ್ಯತೆ ಇದೀಗ ದಟ್ಟವಾಗಿದೆ.