Breaking News

ಅಣ್ಣಾ.. ಈ ಬಸ್‌ ಎಲ್ಲಿಗ್‌ ಹೋಗುತ್ತೆ.? ಶೆಡ್‌ಗೆ ಹೋಗುತ್ತೆ ಬರ್ತೀಯಾ?: ವಿಡಿಯೋ ಭಾರೀ ವೈರಲ್‌

Spread the love

ಬೆಂಗಳೂರು, ಜುಲೈ, 09: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ & ಗ್ಯಾಂಗ್‌ ಜೈಲು ಪಾಲಾದಾಗಿನಿಂದ ಬಾ.. ಶೆಡ್‌ಗೆ ಹೋಗುವ.. ಕೊಂಟೆಬಿಲ್ಲೆ ಆಡುವ ಬಾ ಎನ್ನುವ ರೀಲ್ಸ್‌ ವಿಡಿಯೋಗಳು ಸಾಮಾಜಿಕ ಜಲಾತಾಣಗಳಲ್ಲಿ ಫುಲ್‌ ಟ್ರೆಂಡ್‌ ಆಗಿಬಿಟ್ಟಿವೆ. ಇದೋಗ ಅದೇ ಶೈಲಿಯಲ್ಲಿ ಮತ್ತೊಂದು ವಿಡಿಯೋ ವೈರಲ್‌ ಆಗುತ್ತಿದೆ.

ಅಣ್ಣಾ.. ಈ ಬಸ್‌ ಎಲ್ಲಿಗ್‌ ಹೋಗುತ್ತೆ.? ಶೆಡ್‌ಗೆ ಹೋಗುತ್ತೆ ಬರ್ತೀಯಾ?: ವಿಡಿಯೋ ಭಾರೀ ವೈರಲ್‌

ಚಿಕ್ಕವರಿಂದ ಹಿಡಿದು ಹಿರಿಯರು ಕೂಡ ವಿವಿಧ ಆಯಾಮಗಳಲ್ಲಿ ಈ ರೀಲ್ಸ್‌ ಮಾಡುತ್ತಿದ್ದಾರೆ. ಅದು ಪವಿತ್ರಾ ಗೌಡ ತಮ್ಮ ಮಾಧ್ಯಮದವರಿಗೆ ಕೆಣಕಿದಾಗಿನಿಂದ ಈ ರೀಲ್ಸ್‌ಗಳು ಹುಟ್ಟಿಕೊಂಡವು. ಸುಮ್ಮನೆ ಇರಲಾರ್ದೆ ಇರುವೆ ಬಿಟ್ಟುಕೊಂಡ ಅನ್ನುವ ಪರಿಸ್ಥಿತಿ ಇದೀಗ ಪವಿತ್ರಾ ಗೌಡ ತಮ್ಮನದ್ದಾಗಿದೆ.

ಮಾಧ್ಯಮದವರಿಗೆ ನಮ್ಗೇನು ಮಾಡೋದಿಕ್ಕೆ ಏನು ಕೆಲ್ಸ ಇಲ್ವಾ ಎಂದು ಪವಿತ್ರಾ ಗೌಡ ತಮ್ಮ ಪರಪ್ಪನ ಅಗ್ರಹಾರದ ಜೈಲಿನ ಮುಂದೆ ಪ್ರಶ್ನಿಸಿದ್ದ. ಇದಕ್ಕೆ ನಿರೂಪಕರೊಬ್ಬರು ಬಾ.. ನಮ್ಗೆ ಕೆಲ್ಸ ಇಲ್ಲ.. ಶೇಡ್‌ಗೆ ಹೋಗಿ ಕುಂಟೆಬಿಲ್ಲ ಆಡುವ ಬಾ.. ಎಂದು ಗೇಲಿ ಮಾಡುವ ಮೂಲಕ ಪವಿತ್ರಾ ಗೌಡ ತಮ್ಮಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ತಿರುಗೇಟು ನೀಡಿದ್ದಾರೆ.


Spread the love

About Laxminews 24x7

Check Also

ಡ್ರಗ್ಸ್ ದಂಧೆಕೋರರೊಂದಿಗೆ ಪೊಲೀಸರು ಶಾಮೀಲಾಗಿದ್ದು ಕಂಡುಬಂದ್ರೆ ಎಫ್ಐಆರ್ ದಾಖಲಿಸಿ ಸೇವೆಯಿಂದ ವಜಾ: ಜಿ. ಪರಮೇಶ್ವರ್

Spread the loveಬೆಳಗಾವಿ: ಡ್ರಗ್ಸ್ ಪಿಡುಗಿನ ವಿರುದ್ಧ ಸಮರ ಸಾರಿದ್ದು, ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಮಾದಕವಸ್ತು ಮಾರಾಟಕ್ಕೆ ಉತ್ತೇಜನ ನೀಡುವ ಸಿಬ್ಬಂದಿಗಳ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ