ಹುಬ್ಬಳ್ಳಿ : ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಕಾರವಾರ ಜಿಲ್ಲೆಗಳಲ್ಲಿ ಪುನರ್ವಸು ಮಳೆ ಅಬ್ಬರ ಮುಂದುವರಿದಿದೆ. ಮಹಾರಾಷ್ಟ್ರ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಘಟಪ್ರಭಾ ಹಾಗೂ ಮಲಪ್ರಭಾ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸೋಮವಾರವೂ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೆಲವೆಡೆ ಹಾನಿ ಸಂಭವಿಸಿದೆ.
ಜಲದಿಗ್ಬಂಧನ
ಉತ್ತರ ಕನ್ನಡದ ಕರಾವಳಿಯಲ್ಲೂ ಭಾರೀ ಮಳೆ ಸುರಿಯುತ್ತಿದೆ. ಅಘನಾಶಿನಿ, ವಾಲಗಳ್ಳಿ-ಅರೋಡಿ ರಸ್ತೆಗಳು ಜಲಾವೃತವಾಗಿವೆ. ಅಂಕೋಲಾದ ಹಾರವಾಡದಲ್ಲಿ ಕಡಲ್ಕೊರೆತವಾಗಿದೆ. ಕಾರವಾರದ ಚೆಂಡಿಯಾ, ಇಡೂರು ಬಳಿ ಮನೆಗಳಿಗೆ ಮಳೆ ನೀರು ನುಗ್ಗಿದ ಕಾರಣ ಜಲದಿಗ್ಬಂಧನ ಉಂಟಾಗಿತ್ತು. ಸುಪಾ ಹಿನ್ನೀರು, ಕೊಡಸಳ್ಳಿ, ಕದ್ರಾದಲ್ಲಿ ಭಾರೀ ಮಳೆ ಸುರಿದಿದೆ.