Breaking News

ವಿಪತ್ತು ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ: ಈರಣ್ಣ

Spread the love

ವಿಪತ್ತು ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ: ಈರಣ್ಣ

ಹಾಲಿಂಗಪುರ: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಮಳೆಯಾಗಿ ಮತ್ತು ಅಂತರಾಜ್ಯದಲ್ಲಿ ಮಳೆಯಾಗಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳಿಗೆ ಪ್ರವಾಹ ಬಂದು ಮಹಾಲಿಂಗಪುರ ಸುತ್ತಮುತ್ತಲಿನ ಗ್ರಾಮಗಳು ಪ್ರವಾಹ ಎದುರಿಸುವದರಿಂದ ವಿಪತ್ತು ನಿರ್ವಹಣೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು.

Rain ವಿಪತ್ತು ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ: ಈರಣ್ಣ

ಪುರಸಭೆಯಲ್ಲಿ ಜರುಗಿದ ಸ್ಥಳೀಯ ಮಟ್ಟದ ಅ ಧಿಕಾರಿಗಳ ವಿಪತ್ತು ನಿರ್ವವಣಾ ಮುಂಜಾಗ್ರತೆಯ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊರರಾಜ್ಯಗಳ ಜಲಾಶಯಗಳಿಂದ ನದಿಗಳಿಗೆ ನೀರು ಬಿಡುವುದರಿಂದ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವುದರಿಂದ ಜನ, ಜಾನುವಾರು, ಆಸ್ತಿಹಾನಿ, ಪ್ರಾಣಹಾನಿ, ಸಾಂಕ್ರಾಮಿಕ ರೋಗಗಳು ಬಾರದಂತೆ ಮುಂಜಾಗ್ರತೆಗಾಗಿ ಕೆೈಗೊಳ್ಳಬೇಕಾದ ಕ್ರಮಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು.

ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎಂ.ವಜ್ಜರಮಟ್ಟಿ ಮಾತನಾಡಿ, ರೋಗರುಜಿನಗಳು ಹರಡದಂತೆ ನಿಯಂತ್ರಣ ಹಾಗೂ ವೈದ್ಯಕೀಯ ಉಪಚಾರವನ್ನು ಸಕಾಲಕ್ಕೆ ಒದಗಿಸಲಾಗುವುದು ಎಂದರು.

ಹೆಸ್ಕಾಂನ ಸೆಕ್ಷನ್‌ ಆಫೀಸರ್‌ ಆರ್‌.ಆರ್‌.ಬಾಗೋಜಿ ಮಾತನಾಡಿ, ಮಳೆ ಗಾಳಿಗೆ ಕಂಬ ಬಿದ್ದರೆ, ತಂತಿಗಳು ಹರಿದರೆ ತಕ್ಷಣ ದುರಸ್ಥಿ ಮಾಡಲಾಗುವುದು.ಈಗಾಗಲೇ ಜನನಿಬೀಡ ಪ್ರದೇಶಗಳಲ್ಲಿನ ಟಿಸಿಗಳನ್ನು ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ. ವಿದ್ಯುತ್‌ ತಂತಿಗಳಿಗೆ ತಾಗುವು ಗಿಡಗಳನ್ನು ತೆರವುಗೊಳಿಸುವ ಕೆಲಸ ನಡೆದಿದೆ. ವಿದ್ಯುತ್‌ ಅಪಾಯಕ್ಕೆ ಸಂಬಂಸಿದ ವಿಷಯಗಳಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದರು.

ನೀರಾವರಿ ಇಲಾಖೆಯ ವೆಂಕಟೇಶ ಬೆಳಗಲ್ ಮಾತನಾಡಿ ಕಾಲುವೆಯ ನೀರು ಕೆಂಗೇರಿಮಡ್ಡಿಯ ಬಡಾವಣೆಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗು ಸಾಧ್ಯತೆ ಇರುವದರಿಂದ, ನೀರು ನಿಲ್ಲದಂತೆ ಅಗತ್ಯ ಮುನ್ನಚ್ಚರಿಕೆವಹಿಸಲಾಗುವುದು ಎಂದರು.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ