ಬೆಂಗಳೂರು, ಜುಲೈ 4: ಬೆಂಗಳೂರಿನಲ್ಲಿ ಈಗ ಡೆಂಗ್ಯೂ ಮಹಾಮಾರಿಯ ಹರಡುವಿಕೆ ತೀವ್ರಗೊಂಡಿರುವುದರ ಜತೆಗೆ, ಮಕ್ಕಳಲ್ಲಿ ಕಾಲುಬಾಯಿ ರೋಗ (Hand-foot-and-mouth disease) ಹೆಚ್ಚಾಗಿ ಹರಡುತ್ತಿರುವುದು ಬೆಳಕಿಗೆ ಬಂದಿದೆ.
ಈ ರೋಗ ಸಾಮಾನ್ಯವಾಗಿ 10 ವರ್ಷದ ಒಳಗಿನ ಮಕ್ಕಳಲ್ಲಿ ಕಂಡುಬರುತ್ತಿದ್ದು, ಸಾಂಕ್ರಾಮಿಕ ರೋಗವಾಗಿದೆ. ಕಾಕ್ಸ್‌ಸಾಕಿ ವೈರಸ್ ದೇಹ ಸೇರುವುದರಿಂದ ಸೋಂಕು ತಗಲುತ್ತದೆ. ಇದು ಲಾಲಾರಸ, ಮಲ, ಉಸಿರಾಟದ ಹಾಗೂ ಸೋಂಕಿತ ಮಗುವಿನ ಸಂಪರ್ಕದ ಮೂಲಕವೂ ಹರಡುವ ಸಾಧ್ಯತೆ ಇದೆ. ಹೀಗಾಗಿ ಅತ್ಯಂತ ಸುಲುಭವಾಗಿ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹರಡುತ್ತದೆ.