Breaking News

ಕಾರುಗಳ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಂಭೀರ ಗಾಯ

Spread the love

ಬೈಲಹೊಂಗಲ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಸಂಭವಿಸಿ ಎಂಟು ಜನರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ನಯಾನಗರ ಗ್ರಾಮದ ಸಮೀಪ ಸೋಮವಾರ ನಡೆದಿದೆ.

ನಯಾನಗರ ಗ್ರಾಮದ ಮಲಪ್ರಭಾ ನದಿ ಹತ್ತಿರದ ದಾಬಾ ದಾಟಿ ಸಂಚರಿಸುತ್ತಿದ್ದ ಮಾರುತಿ 800 ಮತ್ತು ಅಲ್ಟೋ ಕಾರು ಪರಸ್ಪರ ಡಿಕ್ಕಿ ಹೊಡಿದಿವೆ.

ಅಪಘಾತದ ರಭಸಕ್ಕೆ ಕಾರುಗಳು ಸಂಪೂರ್ಣ ಜಖಂಗೊಂಡು ನುಜ್ಜುಗುಜ್ಜಾಗಿವೆ.

ಚಾಲಕರಾದ ಲಿಂಗದಳ್ಳಿ ಗ್ರಾಮದ ಕಿರಣ ಅಡಿವೆಪ್ಪ ಪೂಜೇರ, ಆನಿಗೋಳದ ಮಹಾಂತೇಶ ರಾಮನಿಂಗಪ್ಪ ಕುರಿ ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ಸುಗಮಗೊಳಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ: ಪ್ರತಿಭಟನೆ

Spread the love ರಾಮದುರ್ಗ: ತಾಲ್ಲೂಕಿನ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಷೇರುದಾರರ ಹಿತ ಕಾಯದೆ ಎನ್‍ಸಿಎಲ್‍ಟಿ ಹರಾಜು ಹಾಕಿರುವುದನ್ನು ವಿರೋಧಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Sahifa Theme License is not validated, Go to the theme options page to validate the license, You need a single license for each domain name.