Home / ರಾಜಕೀಯ / ಪುಣೆ ಪೋರ್ಷೆ ಕಾರು ಅಪಘಾತ ಕೇಸ್​ನಲ್ಲಿ ಅಪ್ರಾಪ್ತನ ರಿಲೀಸ್; ಅಬ್ಸರ್ವೇಶನ್ ಹೋಮ್​ನಿಂದ ಬಿಡುಗಡೆ

ಪುಣೆ ಪೋರ್ಷೆ ಕಾರು ಅಪಘಾತ ಕೇಸ್​ನಲ್ಲಿ ಅಪ್ರಾಪ್ತನ ರಿಲೀಸ್; ಅಬ್ಸರ್ವೇಶನ್ ಹೋಮ್​ನಿಂದ ಬಿಡುಗಡೆ

Spread the love

ಪುಣೆ (ಮಹಾರಾಷ್ಟ್ರ): ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದ ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಬಾಲಾರೋಪಿಯನ್ನು (17 ವರ್ಷ) ರಿಲೀಸ್​ ಮಾಡಲಾಗಿದೆ. ಅಬ್ಸರ್ವೇಶನ್ ಹೋಮ್‌ನಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಮೇ 19 ರಂದು ಮುಂಜಾನೆ ಕಲ್ಯಾಣಿ ನಗರದಲ್ಲಿ ಶ್ರೀಮಂತ ಬಿಲ್ಡರ್‌ನ ಪುತ್ರನಾದ ಅಪ್ರಾಪ್ತ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕಿಗೆ ಡಿಕ್ಕಿ ಹೊಡೆದಿತ್ತು.ಪುಣೆ ಪೋರ್ಷೆ ಕಾರು ಅಪಘಾತ ಕೇಸ್​ನಲ್ಲಿ ಅಪ್ರಾಪ್ತನ ರಿಲೀಸ್; ಅಬ್ಸರ್ವೇಶನ್ ಹೋಮ್​ನಿಂದ ಬಿಡುಗಡೆ

ಘಟನೆಯಲ್ಲಿ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟ ಎಂಬುವರು ಮೃತಪಟ್ಟಿದ್ದರು. ಪೊಲೀಸರ ಪ್ರಕಾರ ಅಪ್ರಾಪ್ತ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದನು.

ಕೋರ್ಟ್​ ಹೇಳಿದ್ದೇನು?

ನಾವು ಕಾನೂನು, ಬಾಲಾಪರಾಧಿ ಕಾಯಿದೆಯ ಗುರಿಗಳು ಮತ್ತು ಉದ್ದೇಶಗಳಿಗೆ ಬದ್ಧರಾಗಿದ್ದೇವೆ. ಅಪರಾಧದ ಗಂಭೀರತೆಯ ಹೊರತಾಗಿಯೂ ಅವರನ್ನು ವಯಸ್ಕರಿಂದ ಪ್ರತ್ಯೇಕವಾಗಿ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಯಾವುದೇ ಮಗುವಿನಂತೆ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ಅವರ ಪೀಠ ಹೇಳಿದೆ.

ಬಾಲಾರೋಪಿ ತಂದೆಯ ಮೇಲೆ ಕೇಸ್​ ದಾಖಲು

ಮಹಾರಾಷ್ಟ್ರದ ಪುಣೆಯಲ್ಲಿ ಇಬ್ಬರನ್ನು ಬಲಿತೆಗೆದುಕೊಂಡ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಅಪ್ರಾಪ್ತ ಆರೋಪಿಯ ತಂದೆಗೆ ಜೂನ್ 21 ರಂದು ಪುಣೆ ನ್ಯಾಯಾಲಯವು ಜಾಮೀನು ನೀಡಿತ್ತು. ತಂದೆಯನ್ನು ಮೇ 21 ರಂದು ಔರಂಗಾಬಾದ್‌ನಿಂದ ಬಂಧಿಸಲಾಗಿತ್ತು. ಆರೋಪಿಯ ತಂದೆ ಮತ್ತು ಬಾಲಾಪರಾಧಿಗಳಿಗೆ ಮದ್ಯವನ್ನು ಪೂರೈಸಿದ ಬಾರ್ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು 77 ರ ಅಡಿಯಲ್ಲಿ ದಾಖಲಿಸಲಾಗಿದೆ.


Spread the love

About Laxminews 24x7

Check Also

ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು

Spread the love ಮಹಾಲಿಂಗಪುರ: ರೈತ ಸಮುದಾಯವು ಜಾಣತನದಿಂದ ಒಕ್ಕಲುತನ ಮಾಡಿದರೆ ಕಡಿಮೆ ಜಮೀನು, ಅಲ್ಪಾವಧಿಯಲ್ಲಿಯೇ ಲಾಭವನ್ನು ಮಾಡಿಕೊಳ್ಳಬಹುದು ಎಂಬುದನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ