Breaking News

ಎರಡು ಕರಡಿ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

Spread the love

ಕಂಪ್ಲಿ (ಬಳ್ಳಾರಿ): ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ.

ಗ್ರಾಮದ ಅಮರೇಗೌಡ ಅವರು ವಾಯು ವಿಹಾರಕ್ಕೆ ತೆರಳಿದಾಗ ತುಂಗಾಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ ಬಳಿ ಎರಡು ಕರಡಿಗಳು ಕಾಣಿಸಿಕೊಂಡಿವೆ.

ತಕ್ಷಣ ಗ್ರಾಮಕ್ಕೆ ಮರಳಿದ ಅವರು ವಿಷಯ ತಲುಪಿಸಿದ್ದಾರೆ.

ಬಳಿಕ ಎರಡು ಕರಡಿಗಳು ಗ್ರಾಮದಲ್ಲೂ ಕಾಣಿಸಿಕೊಂಡಿವೆ. ಗ್ರಾಮಸ್ಥರು ಗಲಾಟೆ ಮಾಡಿದ್ದರಿಂದ ಒಂದು ದೇವಸಮುದ್ರ-ಕಂಪ್ಲಿ ಸಂಪರ್ಕಿಸುವ ಕ್ರಾಸ್ ಕಡೆ ಓಡಿ ಹೋಗಿದೆ.ಕಂಪ್ಲಿ  | ಎರಡು ಕರಡಿ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

ಮತ್ತೊಂದು ಕರಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ತುರಮಂದಿ ಬಸವೇಶ್ವರ ದೇವಸ್ಥಾನದ ಕಡೆಗೆ ಓಡಿ ಹೋಗಿದೆ. ಜನರ ಗುಂಪು ಅಲ್ಲಿಂದ ಚದುರಿಸಲು ಪ್ರಯತ್ನಿಸಿದಾಗ ಗ್ರಾಮದ ಹೊರ ವಲಯದ ಗೋದಾಮು ಬಳಿ ಬೇಲಿಯಲ್ಲಿ ಅವಿತು ಕುಳಿತಿದೆ.

ಈ ವಿಷಯವನ್ನು ಗ್ರಾಮದ ಹೊನ್ನುರಪ್ಪ ಇತರರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.

ಕರಡಿ ಅವಿತಿರುವ ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದು, ಅವರನ್ನು ಸಿಬ್ಬಂದಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಹೊಸಪೇಟೆ ವಲಯ ಅರಣ್ಯ ಅಧಿಕಾರಿ ಭರತ್ ರಾಜ್ ತಂಡದವರು ಕರಡಿ ಸೆರೆಗಾಗಿ ಸದ್ಯ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಜೂನ್ 13ರಂದು ತಾಲ್ಲೂಕಿನ ಜವುಕು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣಕ್ಕೆ ಕರಡಿ ಪ್ರವೇಶಿಸಿ ಕೆಲ ಕಾಲ ಆತಂಕ ಮೂಡಿಸಿತ್ತು.


Spread the love

About Laxminews 24x7

Check Also

ಶಾಸಕಿ ಜಿ. ಕರೆಮ್ಮಾ ನಾಯಕ್​ ಕಾರು ಅಪಘಾತ

Spread the love ರಾಯಚೂರು: ದೇವದುರ್ಗ ಶಾಸಕಿ ಜಿ. ಕರೆಮ್ಮಾ ನಾಯಕ್​ ತೆರಳುತ್ತಿದ್ದ ಕಾರು ಅಪಘಾತವಾಗಿದ್ದು, ಶಾಸಕಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ