Breaking News

ಮಾವು ಕೀಳಲು ಹೋದಾಗ ವಿದ್ಯುತ್‌ ತಗುಲಿ ವಿದ್ಯಾರ್ಥಿ ಸಾವು

Spread the love

ಹೊಸಕೋಟೆ: ಇಲ್ಲಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ವಿದ್ಯಾರ್ಥಿಯೊಬ್ಬ ಮಾವು ಕೀಳಲು ಹೋಗಿ ವಿದ್ಯುತ್‌ ತಗುಲಿ ಮೃತಪಟ್ಟಿದ್ದಾನೆ.

ಸೂಲಿಬೆಲೆ ಹೋಬಳಿಯ ತಿಮ್ಮಪ್ಪನಹಳ್ಳಿಯ ಸಾಯಿಭುವನ್(13) ಮೃತ ವಿದ್ಯಾರ್ಥಿ. ಈತ 9ನೇ ತರಗತಿಯಲ್ಲಿ ಕಲಿಯುತ್ತಿದ್ದ.

ಹೊಸಕೋಟೆ: ಮಾವು ಕೀಳಲು ಹೋದಾಗ ವಿದ್ಯುತ್‌ ತಗುಲಿ ವಿದ್ಯಾರ್ಥಿ ಸಾವು

ವಿದ್ಯಾರ್ಥಿನಿಲಯ ಕಟ್ಟಡದ ಮೇಲೆ ಬಟ್ಟೆ ಒಣಗಿಸುವ ವೇಳೆ ಪಕ್ಕದಲ್ಲಿದ್ದ ಮಾವಿನ ಮರದಲ್ಲಿದ್ದ ಮಾವಿನ ಹಣ್ಣು ಕೀಳಲು ಹೋಗಿದ್ದ. ಮಾವಿನ ಹಣ್ಣು ಕೀಳಲು ಬಳಸಿದ ಕಂಬಿಗೆ ಮರದ ಸಮೀಪ ಹಾದುಹೋಗಿದ್ದ 11 ಕೆ.ವಿ. ವಿದ್ಯುತ್‌ ತಗುಲಿ ಕಟ್ಟಡದಿಂದ ‌ಕೆಳಗೆ ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಆಸ್ಪತ್ರೆ ಬಳಿ ಮೃತ ಸಾಯಿಭುವನ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಒಂದೂವರೆ ವರ್ಷದಲ್ಲಿ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಎಸ್.ಜಿ.ನಂಜಯ್ಯನಮಠ

Spread the loveರಾಯಚೂರು: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ