ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಪ್ರಧಾನಿ ಮೋದಿ ಅವರು ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಇಂದು 3ನೇ ಬಾರಿಗೆ ಭಾರತದ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗಾದ್ರೆ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ, 2014 ರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಮಯದಲ್ಲಿ ಹೇಗೆ ಕಾಣ್ತಾ ಇದ್ರು?
ಇಂದು ಯಾವ ರೀತಿ ಕಂಡರು? ಬನ್ನಿ ನೋಡೋಣ.
2014ರ ಲೋಕಸಭೆ ಚುನಾವಣೆ ಫಲಿತಾಂಶದ ಸಮಯದಲ್ಲಿ ಭರ್ಜರಿ ಗೆಲುವು ಪಡೆದು BJP ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಈ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರು ಮೊಟ್ಟ ಮೊದಲ ಬಾರಿಗೆ ಪ್ರಧಾನಿ ಪಟ್ಟಕ್ಕೆ ಏರಿದ್ದರು. ಹೀಗೆ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯಸ್ಥನ ಸ್ಥಾನ ಪಡೆದ ಪ್ರಧಾನಿ ನರೇಂದ್ರ ಮೋದಿ ಹ್ಯಾಟ್ರಿಕ್ ಬಾರಿಸಿದ್ದಾರೆ. ಹಾಗಾದ್ರೆ ಪ್ರಧಾನಿ ಮೋದಿ ಅವರು 2014ರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಮಯದಲ್ಲಿ ಹೇಗೆ ಕಾಣುತ್ತಿದ್ದರು ಗೊತ್ತಾ? ಇಂದು ಯಾವ ರೀತಿ ಕಂಡರು? ಮುಂದೆ ಓದಿ.
2014 ಟು 2024 ಪ್ರಮಾಣ ಪ್ರಯಾಣ!
ಬಿಜೆಪಿ 2024ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಹಿನ್ನಡೆ ಕಂಡ ಹಿನ್ನೆಲೆ ಸಂಕಷ್ಟ ಎದುರಿಸಿ, ಕೊನೆಗೆ ಮಿತ್ರ ಪಕ್ಷಗಳ ಸಹಾಯದ ಮೂಲಕ ಇದೀಗ ಅಧಿಕಾರ ಹಿಡಿದಿದೆ. ಬಿಜೆಪಿ ಪಕ್ಷ 400 ಸ್ಥಾನಗಳಲ್ಲಿ ಗೆಲುವು ಕಂಡು, ಭರ್ಜರಿ ಅಬ್ಬರದೊಂದಿಗೆ ಸರ್ಕಾರ ರಚಿಸಲಿದೆ ಅಂತಾ ಊರೆಲ್ಲಾ ಮಾತನಾಡಿತ್ತು. ಆದರೆ ಮತದಾರ ಪ್ರಭು ಈ ನಿರೀಕ್ಷೆ ಸುಳ್ಳು ಮಾಡಿ, ಬಿಜೆಪಿಗೆ 240 ಸ್ಥಾನ ಮಾತ್ರ ನೀಡಿದ್ದಾನೆ. ಇದೇ ಸಮಯದಲ್ಲಿ ಪ್ರಧಾನಿ ಮೋದಿ ಅವರು ಕೂಡ ಹ್ಯಾಟ್ರಿಕ್ ಬಾರಿಸಿ 3ನೇ ಬಾರಿಗೆ ಪ್ರಧಾನಿ ಆಗಿದ್ದಾರೆ. ಅದರಲ್ಲೂ ಮೋದಿ ಅವರು 2014ರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಫೋಟೋ ಕೂಡ ವೈರಲ್ ಆಗುತ್ತಿದೆ.
3ನೇ ಬಾರಿಗೆ ಪ್ರಮಾಣವಚನ!
ಈಶ್ವರನ ಮೇಲೆ ಪ್ರಮಾಣ ಮಾಡಿ ಪ್ರಧಾನಿ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. 2014ರ ಲೋಕಸಭೆ ಚುನಾವಣೆ ವೇಳೆ ಮೊದಲನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದರು ಪ್ರಧಾನಿ ಮೋದಿ. ಇದೀಗ 2024ರ ಲೋಕಸಭೆಯ ಚುನಾವಣೆ ವೇಳೆ ಕೂಡ ಎನ್‌ಡಿಎ ಜೊತೆಗೂಡಿ ಪ್ರಧಾನಿ ಮೋದಿ ಅವರು ಸರ್ಕಾರ ರಚನೆ ಮಾಡಿದ್ದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಾಗೇ ಎನ್‌ಡಿಎ ಸರ್ಕಾರ ಮತ್ತೊಮ್ಮೆ ಇದೀಗ ಅಧಿಕಾರಕ್ಕೆ ಬಂದಿದ್ದು ಪ್ರಧಾನಿ ಮೋದಿ ಅವರ ಜೊತೆಗೆ ಹಲವು ಸಚಿವರು ಕೂಡ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.