Breaking News

ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆಗಾಗಿ ಸರಕಾರಕ್ಕೆ ಮನವಿ………….

Spread the love

ಚಿಕ್ಕೋಡಿ:  ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆಗಾಗಿ ಸುಪ್ರಿಂಕೋರ್ಟ್ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸಲು ಸರಕಾರ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶ ನೀಡುವಂತೆ ಒತ್ತಾಯಿಸಿ ಮಂಗಳವಾರ ಮೂಲ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ಉಪವಿಭಾಗಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಲಂಬಾಣಿ(ಬಂಜಾರ), ಭೋವಿ, ಕೊರಚ ಕೊರಮ ಮುಂತಾದ ಸಮುದಾಯದ ಜನರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಲು ಸುಪ್ರಿಂಕೋರ್ಟ್ ಆದೇಶ ಮಾಡಿರುತ್ತದೆ. ಆದ್ದರಿಂದ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಸುಪ್ರಿಂಕೋರ್ಟ್ ಆದೇಶ ಅನುಷ್ಠಾನಗೊಳಿಸಲು ಸೂಚನೆ ನೀಡಬೇಕು.ಸುಪ್ರಿಂಕೋರ್ಟಿಗೆ ಅನುಪಾಲನ ವರದಿ ನೀಡುವ ಮೂಲಕ ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಅಶೋಕ ಭಂಡಾರಕರ, ಅರವಿಂದ ಘಟ್ಟಿ, ಸುಭಾಷ ಯರನಾಳೆ, ಪ್ರಲ್ಹಾದ ಕದಮ, ಭರತ ನಿರ್ಮಳೆ, ತುಕಾರಾಮ ಭಂಡಾರೆ, ರೇವಪ್ಪ ತಳವಾರ, ಬಸವರಾಜ ಡಾಕೆ, ಶೇಖರ ಪ್ರಭಾತ, ಸುದರ್ಶನ ತಮ್ಮನ್ನವರ, ಎಂ.ಆರ್.ಯಾಧವ, ತುಕಾರಮ ಭಂಡಾರೆ, ಮಹಾವೀರ ಮೋಹಿತೆ, ರಾಜು ಹಕ್ಯಾಗೋಳ, ಅಪ್ಪಾಸಾಬ ಬ್ಯಾಳಿ,ತಾನಾಜಿ ಶಿಂಧೆ, ದಿಲಿಪ ಕಾಂಬಳೆ, ಜಿ.ಎಸ್.ಜ್ಯೋತಿ, ವಿಕ್ರಮ ಶಿಂಗಾಡೆ, ನಿರಂಜನ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ತವಂದಿ ಘಾಟನಲ್ಲಿ ಕಂದಕಕ್ಕೆ ಬಿದ್ದ ಕಂಟೇನರ್ ವಾಹನ

Spread the love ನಿಪ್ಪಾಣಿಯ ತವಂದಿ ಘಾಟನಲ್ಲಿ ಕಂದಕಕ್ಕೆ ಬಿದ್ದ ಕಂಟೇನರ್ ವಾಹನ ಚಿಕ್ಕೋಡಿ:ನಿಪ್ಪಾಣಿ ತಾಲೂಕಿನ ತವಂದಿ ಘಾಟ್‌ನಲ್ಲಿ ಕಂಟೇನರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ