ಅಯೋಧ್ಯೆ: ರಾಮನ ನಾಡು ಅಯೋಧ್ಯೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಫೈಜಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಗೆಲುವು ಸಾಧಿಸಿದ್ದು, ಬಿಜೆಪಿಗೆ ತೀವ್ರ ಮುಖಭಂಗವನ್ನು ಅನುಭವಿಸಿದೆ. ಆದರೆ, ಬಿಜೆಪಿಯ ಸೋಲು ಅಯೋಧ್ಯೆಯ ವ್ಯಾಪಾರಸ್ಥರನ್ನು ಸಂಕಷ್ಟಕ್ಕೆ ತಳ್ಳಿದೆ.
ಅಂಗಡಿಯ ಮಾಲೀಕ ಅಹತ್ ಸಾಹು ಮಾತನಾಡಿದ್ದು, ಬಿಜೆಪಿ ಆಡಳಿತವು ಅಯೋಧ್ಯೆ ಮಂದಿರದ ಅಭಿವೃದ್ಧಿಗಾಗಿ ನಮ್ಮ ಅಂಗಡಿಗಳನ್ನು ಸ್ವಾದೀನ ಪಡಿಸಿಕೊಂಡಿತ್ತು. ಆಗ ನಮಗೆ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡಿತ್ತು. ಆದರೆ, ಮುಂದಿನ ದಿನಗಳಲ್ಲಿ ಹೊಸ ಅಂಗಡಿಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆಯನ್ನು ನೀಡಿತ್ತು. ಅದಕ್ಕಾಗಿ ನಾವು 15-20 ಲಕ್ಷ ರೂಪಾಯಿ ಪರಿಹಾರವನ್ನು ಕೇಳಿದ್ದೇವು ಎಂದು ಹೇಳಿದ್ದಾರೆ.
ಹಾಗೆಯೇ, ಇಲ್ಲಿನ ಜನರು ಕೂಡ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಇಲ್ಲಿನ ಜನರಿಗೆ ಯಾವುದೇ ಸಹಾಯ ಮಾಡಿಲ್ಲ. ನಾವು ರಾಮನನ್ನು ಆರಾಧಿಸುತ್ತೇವೆ. ಆದರೆ, ನಮ್ಮ ಜೀವನೋಪಾಯವನ್ನು ಕಸಿದುಕೊಂಡರೆ ನಾವು ಹೇಗೆ ಬದುಕುತ್ತೇವೆ? ರಾಮಪಥ ನಿರ್ಮಾಣದ ವೇಳೆ ಸ್ಥಳೀಯರಿಗೆ ಮಳಿಗೆಗಳನ್ನು ಮಂಜೂರು ಮಾಡುವುದಾಗಿ ಬಿಜೆಪಿ ಹೇಳಿತ್ತು. ಆ ಕಾರ್ಯ ಇನ್ನೂ ನಡೆದಿಲ್ಲ ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ.