Breaking News

5 ನಿಗಮ, ಮಂಡಳಿಗಳ ಸರ್ಕಾರಿ ಹುದ್ದೆಗೆ ನಡೆಸಿದ್ದ ಪರೀಕ್ಷೆಗಳ ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

Spread the love

ಬೆಂಗಳೂರು: ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್ , ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ, ಪರೀಕ್ಷೆಯ ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿ ಬಿಡುಗಡೆ ಮಾಡಲಾಗಿದ್ದು, ಎಕ್ಸಾಂ ಬರೆದವರು ತಮ್ಮ ಅಂಕ ಪಟ್ಟಿಯನ್ನು ನೋಡಬಹುದಾಗಿದೆ.

5 ನಿಗಮ, ಮಂಡಳಿಗಳ ಸರ್ಕಾರಿ ಹುದ್ದೆಗೆ ನಡೆಸಿದ್ದ ಪರೀಕ್ಷೆಗಳ ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

ಸದರಿ ಪರೀಕ್ಷೆಗಳಿಗೆ ಹಾಜರಾದ ಅಭ್ಯರ್ಥಿಗಳ ತಾತ್ಕಾಲಿಕ ಅಂಕಪಟ್ಟಿಯನ್ನು ದಿನಾಂಕ 22-04-2024 ರಂದು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಪರಿಷ್ಕೃತ ತಾತ್ಕಾಲಿಕ ಅಭ್ಯರ್ಥಿಗಳ ಅಂಕಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಸದರಿ ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ kea2023exam@gmail.com ಗೆ ಇ-ಮೇಲ್‌ ಮೂಲಕ 14-06-2024 ರ ಮಧ್ಯಾಹ್ನ 12-00 ರೊಳಗಾಗಿ ಸಲ್ಲಿಸಬಹುದು.
ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿ ಚೆಕ್‌ ಮಾಡುವುದು ಹೇಗೆ?
– ಕೆಇಎ ವೆಬ್‌ಸೈಟ್‌ https://cetonline.karnataka.gov.in/kea/indexnew ಗೆ ಭೇಟಿ ನೀಡಿ.
– ‘ಇತ್ತೀಚಿನ ಪ್ರಕಟಣೆಗಳು’ ಎಂಬಲ್ಲಿ ಗಮನಿಸಿ.
– ಇಲಾಖಾವಾರು – ಹುದ್ದೆವಾರು ತಾತ್ಕಾಲಿಕ ಅಂಕಪಟ್ಟಿಯ ಲಿಂಕ್‌ ಇರುತ್ತದೆ.
– ನೀವು ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆದ ಇಲಾಖೆ ಮತ್ತು ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.
– ಪಿಡಿಎಫ್‌ ಪೇಜ್‌ ಒಂದು ಓಪನ್ ಆಗುತ್ತದೆ. ನಿಮ್ಮ ರಿಜಿಸ್ಟರ್ ನಂಬರ್, ಹೆಸರು ಮೂಲಕ ಅಂಕಪಟ್ಟಿ ಚೆಕ್‌ ಮಾಡಿಕೊಳ್ಳಬಹುದು.


Spread the love

About Laxminews 24x7

Check Also

ಬಿಜೆಪಿ-ಜೆಡಿಎಸನಲ್ಲಿ ಅಸಮಾಧಾನಗೊಂಡ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಏನಂದ್ರು??

Spread the loveಜ್ಯಾತ್ಯಾತೀತವಾಗಿ ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ ಬರುವ ಕಾರ್ಯಕರ್ತರಿಗೆ ಪಕ್ಷದಲ್ಲಿ ಸ್ವಾಗತವಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ