ಶಿರಸಿ: ಬರೋಬ್ಬರಿ 6.5 ಅಡಿ ಉದ್ದದ ನಾಗರ ಹಾವೊಂದು ಅಡುಗೆ ಮನೆಯೊಳಗೆ ಸೇರಿಕೊಂಡಿದ್ದು ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಹಿಡಿದು ಬಳಿಕ ಕಾಡಿಗೆ ಬಿಟ್ಟ ಘಟನೆ ಭಾನುವಾರ ನಡೆದಿದೆ.
ತಾಲೂಕಿನ ಯಡಹಳ್ಳಿ ಗದ್ದೆಮನೆಯ ರಾಮಚಂದ್ರ ಟಿ.ಹೆಗಡೆ ಅವರ ಮನೆಯ ಅಡುಗೆ ಕೋಣೆಯೊಳಗೆ ನಾಗರ ಹಾವು ಸೇರಿಕೊಂಡಿತ್ತು ಈ ವಿಚಾರವನ್ನು ಅವರ ಮಗ ಮಂಜುನಾಥ ಹೆಗಡೆ ಉಗ ತಜ್ಞ ಪ್ರಶಾಂತ್ ಹುಲೇಕಲ್ ಅವರಿಗೆ ಮಾಹಿತಿ ನೀಡಿದ್ದು ಬಳಿಕ ಬಂದ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.