Breaking News

ದಸರಾ ಆನೆ ಅರ್ಜುನ’ನ ಸಮಾಧಿ ವಿರೂಪಗೊಳಿಸಿದವರ ವಿರುದ್ಧ ‘FIR ದಾಖಲು’

Spread the love

ಹಾಸನ: ಕಾಡಾನೆಯನ್ನು ಸೆರೆ ಹಿಡಿಯೋ ಕಾರ್ಯಾಚರಣೆಯ ವೇಳೆ ಕಾದಾಟದಲ್ಲಿ ದಸಹಾ ಆನೆ ಅರ್ಜುನ ಸಾವನ್ನಪ್ಪಿತ್ತು. ಈ ಆನೆಯ ಸಮಾಧಿಯನ್ನು ಅದೇ ಸ್ಥಳದಲ್ಲಿ ಮಾಡಲಾಗಿತ್ತು. ಇಂತಹ ಸಮಾಧಿಯನ್ನು ಕೆಲ ಕಿಡಿಗೇಡಿಗಳು ವಿರೋಪಗೊಳಿಸಿದ್ದರು. ಅಂತವರ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ.

'ದಸರಾ ಆನೆ ಅರ್ಜುನ'ನ ಸಮಾಧಿ ವಿರೂಪಗೊಳಿಸಿದವರ ವಿರುದ್ಧ 'FIR ದಾಖಲು'

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ವಲಯ ಅರಣ್ಯದಲ್ಲಿ ದಸರಾ ಆನೆ ಅರ್ಜುನನ್ನು ಸಮಾಧಿ ಮಾಡಲಾಗಿತ್ತು. ಈ ಸಮಾಧಿಯನ್ನು ತಾವು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕಾಗಿ ಮೀಸಲು ಅರಣ್ಯದೊಳಗೆ ಪ್ರವೇಶಿಸಿ, ಅರ್ಜುನನ ಸಮಾಧಿಯನ್ನು ವಿರೂಪಗೊಳಿಸಿದ್ದರು.

ಈ ಹಿನ್ನಲೆಯಲ್ಲಿ ಮೀಸಲು ಅರಣ್ಯವಾಗಿದ್ದರೂ ಅತಿಕ್ರಮವಾಗಿ ಪ್ರವೇಶ ಮಾಡಿ ದಸರಾ ಆನೆ ಅರ್ಜುನನ ಸಮಾಧಿ ವಿರೂಪಗೊಳಿಸಿದ್ದರಿಂದ ಯಸಳೂರು ವಲಯ ಅರಣ್ಯಾಧಿಕಾರಿ ಹೆಚ್.ಡಿ ಕೋಟೆ ನವೀನ್ ವಿರುದ್ಧ ದೂರು ನೀಡಿದ್ದರು. ಈ ದೂರು ಆಧರಿಸಿ, ಎಫ್‌ಐಆರ್ ದಾಖಲಾಗಿದೆ.


Spread the love

About Laxminews 24x7

Check Also

ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Spread the loveಬೀದರ್: ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ