Breaking News

IPL 2024 Awards: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ

Spread the love

IPL 2024) ಸೀಸನ್ 17 ರ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸನ್​ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಕೆಕೆಆರ್ ತಂಡದ ಕರಾರುವಾಕ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಸನ್​ರೈಸರ್ಸ್ ಹೈದರಾಬಾದ್ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದ್ದರು.

ಪರಿಣಾಮ ಕೇವಲ 18.3 ಓವರ್​ಗಳಲ್ಲಿ 113 ರನ್​ಗಳಿಸಿ ಎಸ್​ಆರ್​ಹೆಚ್​ ಸರ್ವಪತನ ಕಂಡಿತು.114 ರನ್​ಗಳ ಸುಲಭ ಗುರಿ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ (39) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಸ್ಪೋಟಕ ಇನಿಂಗ್ಸ್ ಆಡಿದರು. ಕೇವಲ 26 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 52 ರನ್ ಬಾರಿಸುವ ಮೂಲಕ 10.3 ಓವರ್​ಗಳಲ್ಲಿ ಕೆಕೆಆರ್ ತಂಡವನ್ನು ಗುರಿ ಮುಟ್ಟಿಸಿದರು.

ಶಸ್ತಿಗಳ ಪಟ್ಟಿ ಪ್ರಶಸ್ತಿ ವಿಜೇತರು ಬಹುಮಾನ ಮೊತ್ತ
ಸ್ಟ್ರೈಕರ್ ಆಫ್ ದಿ ಫೈನಲ್ ಮ್ಯಾಚ್ ವೆಂಕಟೇಶ್ ಅಯ್ಯರ್ 1 ಲಕ್ಷ ರೂ.
ಸೂಪರ್ ಸಿಕ್ಸ್ (ಫೈನಲ್ ಮ್ಯಾಚ್) ವೆಂಕಟೇಶ್ ಅಯ್ಯರ್ 1 ಲಕ್ಷ ರೂ.
ಅತೀ ಹೆಚ್ಚು ಫೋರ್ (ಫೈನಲ್ ಮ್ಯಾಚ್) ರಹಮಾನುಲ್ಲಾ ಗುರ್ಬಾಝ್ 1 ಲಕ್ಷ ರೂ.
ಗ್ರೀನ್ ಡಾಟ್ ಬಾಲ್ (ಫೈನಲ್ ಮ್ಯಾಚ್) ಹರ್ಷಿತ್ ರಾಣಾ 1 ಲಕ್ಷ ರೂ.
ಪಂದ್ಯ ಶ್ರೇಷ್ಠ (ಫೈನಲ್ ಮ್ಯಾಚ್) ಮಿಚೆಲ್ ಸ್ಟಾರ್ಕ್ 5 ಲಕ್ಷ ರೂ.
ಉದಯೋನ್ಮುಖ ಆಟಗಾರ ನಿತೀಶ್ ರೆಡ್ಡಿ 10 ಲಕ್ಷ ರೂ.
ಸ್ಟ್ರೈಕರ್ ಆಫ್ ದಿ ಸೀಸನ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ 10 ಲಕ್ಷ ರೂ.
ಫ್ಯಾಂಟಸಿ ಪ್ಲೇಯರ್ ಸುನಿಲ್ ನರೈನ್ 10 ಲಕ್ಷ ರೂ.
ಅತೀ ಹೆಚ್ಚು ಫೋರ್​ಗಳು ಟ್ರಾವಿಸ್ ಹೆಡ್ 10 ಲಕ್ಷ ರೂ.
ಅತ್ಯುತ್ತಮ ಕ್ಯಾಚ್ ರಮಣ್​ದೀಪ್ ಸಿಂಗ್ 10 ಲಕ್ಷ ರೂ.
ಫೇರ್ ಪ್ಲೇ ಅವಾರ್ಡ್​ ಎಸ್​ಆರ್​ಹೆಚ್​ 10 ಲಕ್ಷ ರೂ.
ಪರ್ಪಲ್ ಕ್ಯಾಪ್ ಹರ್ಷಲ್ ಪಟೇಲ್ 10 ಲಕ್ಷ ರೂ.
ಆರೆಂಜ್ ಕ್ಯಾಪ್ ವಿರಾಟ್ ಕೊಹ್ಲಿ 10 ಲಕ್ಷ ರೂ.
 ಅತ್ಯಂತ ಮೌಲ್ಯಯುತ ಆಟಗಾರ ಸುನಿಲ್ ನರೈನ್ 10 ಲಕ್ಷ ರೂ.
ಪಿಚ್ & ಗ್ರೌಂಡ್ ಪ್ರಶಸ್ತಿ ಹೈದರಾಬಾದ್ ಸ್ಟೇಡಿಯಂ 50 ಲಕ್ಷ ರೂ.
ರನ್ನರ್ಸ್ ಅಪ್ ಸನ್ ರೈಸರ್ಸ್ ಹೈದರಾಬಾದ್ 12.5 ಕೋಟಿ ರೂ.
ಚಾಂಪಿಯನ್ಸ್​ ಕೊಲ್ಕತ್ತಾ ನೈಟ್ ರೈಡರ್ಸ್ 20 ಕೋಟಿ ರೂ.

Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ