ಬೆಂಗಳೂರು, ಮೇ.25: ಜಿ.ಆರ್.ಫಾರ್ಮ್ ಹೌಸ್ ರೇವ್ ಪಾರ್ಟಿ (Rave Party) ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಪಾರ್ಟಿಯೊಳಗಿನ ಮೋಜು ಮಸ್ತಿಯ ವಿಡಿಯೋಗಳು ವೈರಲ್ ಆದ್ರೆ, ಸಿಸಿಬಿ (CCB) ಅಧಿಕಾರಿಗಳಿಗಳ ಜೊತೆಗೆ ನಟಿ ಹೇಮಾ ಮಾಡಿದ ಡ್ರಾಮಾ ಕೂಡ ಗೊತ್ತಾಗಿದೆ.
ಇದೆಲ್ಲದರ ನಡುವೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳ ತಲೆದಂಡ ಕೂಡ ಆಗಿದೆ.
ಅಷ್ಟೇ ಅಲ್ಲದೆ ಇದೀಗ ಆಂಧ್ರ ಸಚಿವ ಕಾಕನಿ ಗೋವರ್ಧನ ರೆಡ್ಡಿ (Kakani Govardhan Reddy) ಹಾಘೂ ಎಂಎಲ್ಎ ಶ್ರೀಕಾಂತ್ ರೆಡ್ಡಿ ಆಪ್ತರನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಮೇ 19 ರಂದು ಎಲೆಕ್ಟ್ರಾನಿಕ್ ಸಿಟಿ ಹೊರವಲಯದ ಜಿ.ಆರ್.ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಆಯೋಜನೆಯಾಗಿತ್ತು. ಈ ಪಾರ್ಟಿಗೆ ಸಿಸಿಬಿ ತಂಡ ದಾಳಿ ನಡೆಸಿದ್ದು ತೆಲಗು ನಟಿ ಹೇಮಾ, ಆಶಿ ರಾಯ್ ಸೇರಿದಂತೆ ಹಲವು ಸ್ಟಾರ್ಗಳನ್ನು ವಶಕ್ಕೆ ಪಡೆಯಲಾಗಿತ್ತು.
ಆ ವೇಳೆ ಕಾರೊಂದರಲ್ಲಿ ಎಂಎಲ್ಎ ಪಾಸ್ ಪತ್ತೆಯಾಗಿತ್ತು. ಸದ್ಯ ಈಗ ಸಚಿವರಾಗಿರುವ ಆಂಧ್ರದ ಕಾಕಾನಿ ಗೋವರ್ಧನ್ ರೆಡ್ಡಿ ಎಂಬ ಎಂಎಲ್ಎ ಪಾಸ್ ಪತ್ತೆಯಾದ ಹಿನ್ನೆಲೆ ಜಾಡು ಬೆನ್ನತಿದ ಸಿಸಿಬಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Laxmi News 24×7