Breaking News

ಹುಬ್ಬಳ್ಳಿ | ಐಟಿ ಪಾರ್ಕ್‌: ಸೌಕರ್ಯ ಕೊರತೆ, ಪಾಳು ಬಿದ್ದ ಮಳಿಗೆ

Spread the love

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಸಾಫ್ಟ್‌ವೇರ್‌ ಕಂಪನಿಗಳನ್ನು ಉತ್ತೇಜಿಸಲು ಮತ್ತು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಆರಂಭವಾದ ನಗರದ ಮಾಹಿತಿ ತಂತ್ರಜ್ಞಾನ ಪಾರ್ಕ್‌ (ಐಟಿ ಪಾರ್ಕ್‌) ಮೂಲಸೌಲಭ್ಯ ಕೊರತೆ ಮತ್ತು ನಿರ್ವಹಣೆಯ ಸಮಸ್ಯೆ ಎದುರಿಸುತ್ತಿದೆ.

ಹುಬ್ಬಳ್ಳಿ | ಐಟಿ ಪಾರ್ಕ್‌: ಸೌಕರ್ಯ ಕೊರತೆ, ಪಾಳು ಬಿದ್ದ ಮಳಿಗೆ

ಹುಬ್ಬಳ್ಳಿ ನಗರದಲ್ಲಿ ಐಟಿ ಪಾರ್ಕ್‌ ಆರಂಭಿಸುವ ಮೂಲಕ ಸಾಫ್ಟ್‌ವೇರ್‌ ಕಂಪನಿಗಳು, ಬಿಪಿಒ, ಕಾಲ್‌ ಸೆಂಟರ್‌ಗಳಿಗೆ ಅವಕಾಶ ನೀಡಿದರೆ, ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಐಟಿ ಕಂಪನಿಗಳ ಉದ್ಯೋಗದಾತರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಸದುದ್ದೇಶದಿಂದ ಐಟಿ ಪಾರ್ಕ್ ಇಲ್ಲಿ ಆರಂಭವಾಗಿದೆ. ಇದೀಗ ತನ್ನ ಮೂಲ ಉದ್ದೇಶವನ್ನೇ ಕಳೆದುಕೊಂಡು ಕಟ್ಟಡ ಪಾಳು ಬಿದ್ದಂತೆ ಕಾಣುತ್ತದೆ.

ಪಾಳು ಬಿದ್ದ ಮಳಿಗೆ, ಶಿಥಿಲ ಕಟ್ಟಡ:

ರಾಜ್ಯ ಸರ್ಕಾರವು ಅಂದಾಜು ₹36 ಕೋಟಿ ವೆಚ್ಚದಲ್ಲಿ ವಿಶಾಲವಾಗಿ ಐಟಿ ಪಾರ್ಕ್‌ ಕಟ್ಟಡವನ್ನು ನಿರ್ಮಿಸಿದೆ. ಇಲ್ಲಿನ ಸಂಕೀರ್ಣದಲ್ಲಿ 200ಕ್ಕೂ ಅಧಿಕ ಮಳಿಗೆಗಳಿವೆ. ಬಹುತೇಕ ಮಳಿಗೆಗಳು ಪಾಳು ಬಿದ್ದಿದ್ದು, ದೂಳು, ತ್ಯಾಜ್ಯಗಳಿಂದ ತುಂಬಿವೆ. ಮಳಿಗೆಗಳ ಸಂಪರ್ಕ ಕಲ್ಪಿಸುವ ನೀರಿನ ಪೈಪುಗಳು ಹಾಳಾಗಿವೆ. ಮಳಿಗೆಯೊಳಗೆ ನೀರು ಸೋರಿಕೆ ಆಗುತ್ತಿದೆ. ಕಟ್ಟಡಗಳು ಶಿಥಿಲವಾಗಿ, ದುರ್ವಾಸನೆ ಬೀರುತ್ತಿವೆ. ಶೌಚಾಲಯಗಳ ಸ್ಥಿತಿ ಹೇಳತೀರದಾಗಿದೆ.

ಇಲ್ಲಿನ ಕೆಲ ಐಟಿ ಕಂಪನಿಗಳು, ಬಿಪಿಒ ಕಾಲ್‌ಸೆಂಟರ್‌ಗಳು ಕಾರ್ಯ ನಿರ್ವಹಿಸುವಾಗ ವಿದ್ಯುತ್‌ ಸಮಸ್ಯೆ ಉಂಟಾದಲ್ಲಿ ತಕ್ಷಣ ಪರ್ಯಾಯವಾಗಿ ವಿದ್ಯುತ್‌ ವ್ಯವಸ್ಥೆ ಸೌಲಭ್ಯ ಕೂಡ ಕಲ್ಪಿಸಿಲ್ಲ.

ಐಟಿಯೇತರ ಕಂಪನಿಗಳ ಹಬ್‌:

ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾದ ಕಂಪನಿಗಳನ್ನು ಪೋಷಿಸುವ ಉದ್ದೇಶದಿಂದ ಆರಂಭವಾದ ಐಟಿ ಪಾರ್ಕ್‌ ಕಟ್ಟಡದ ಸಂಕೀರ್ಣವು ಐಟಿಯೇತರ ವಾಣಿಜ್ಯ ಮಳಿಗೆಗಳಿಂದ ತುಂಬಿದೆ. ಮೂಲಸೌಕರ್ಯ ಸಮಸ್ಯೆ, ನಿರ್ವಹಣೆ ಕೊರತೆಯಿಂದಾಗಿ ಹೆಚ್ಚಿನ ಮಳಿಗೆಯವರು ಖಾಲಿ ಮಾಡಿದ್ದಾರೆ. ಕೆಲವರು ಕಚೇರಿಯ ಪರಿಕರಗಳನ್ನು ಮಳಿಗೆಯಲ್ಲಿಯೇ ಬಿಟ್ಟು, ಬಾಡಿಗೆಯನ್ನೂ ಪಾವತಿಸದೇ ಮಳಿಗೆಗಳಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಕಟ್ಟಡದ ಬಹುತೇಕ ಮಳಿಗೆಗಳು ಬಿಕೋ ಎನ್ನುತ್ತಿವೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ