Breaking News

ಮಳೆ.. ಮಳೆ.. ಆರ್‌ಸಿಬಿ VS ಚೆನ್ನೈ ಮ್ಯಾಚ್ ರದ್ದು?

Spread the love

ಳೆ.. ಮಳೆ.. ಎಲ್ಲೆಲ್ಲೂ ಮಳೆಯ ಅಬ್ಬರ ಶುರುವಾಗಿದೆ. ಅದರಲ್ಲೂ ಬೆಂಗಳೂರು & ಚೆನ್ನೈ ನಡುವೆ ಇಂದು ಮಹತ್ವದ ಐಪಿಎಲ್ ಪಂದ್ಯ ನಡೆಯುವ ಸಮಯದಲ್ಲಿ ಮಳೆರಾಯ ಕಾಟ ಕೊಡಲು ಶುರು ಮಾಡಿದ್ದಾನೆ. ಹೀಗಿದ್ದಾಗ ಇಂದು ಆರ್‌ಸಿಬಿ VS ಸಿಎಸ್‌ಕೆ (RCB VS CSK) ಮ್ಯಾಚ್ ನಡೆಯುವುದೇ ಅನುಮಾನ ಎನ್ನುವಂತಾಗಿದೆ.ಮಳೆ.. ಮಳೆ.. ಆರ್‌ಸಿಬಿ VS ಚೆನ್ನೈ ಮ್ಯಾಚ್ ರದ್ದು?

ಇದೇ ಸಮಯದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೊಂದು ಆಘಾತದ ಸುದ್ದಿ ಸಿಕ್ಕಿದೆ.

ಹೌದು, ಬೆಂಗಳೂರಲ್ಲಿ ಈಗಾಗಲೇ ಮಳೆ ಶುರುವಾಗಿದ್ದು ಇಂದು ಪೂರ್ತಿ ದಿನ ಎಡಬಿಡದೆ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ.

ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಭರ್ಜರಿ ಮಳೆ ಬರುತ್ತಿದೆ.

ಅದೇ ರೀತಿ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಭಾರಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಇಂದು ಆರ್‌ಸಿಬಿ ಬೆಂಗಳೂರು ಮತ್ತು ಸಿಎಸ್‌ಕೆ ಚೆನ್ನೈ ನಡುವಿನ ಪ್ರಮುಖ ಪಂದ್ಯವೇ ರದ್ದಾಗುವ ಭಯ ಆವರಿಸಿದೆ.

ಯಾಕಂದ್ರೆ ಈ ಪಂದ್ಯ ಗೆಲ್ಲದೇ ಹೋದರೆ RCB ತಂಡ ಐಪಿಎಲ್ ಟೂರ್ನಿಯಿಂದಲೇ ಹೊರಗೆ ಬೀಳಲಿದೆ.

ಆರ್‌ಸಿಬಿ ಮ್ಯಾಚ್‌ಗಾಗಿ ಮಳೆ ನಿಲ್ಲುತ್ತಾ?

ಈಗಿನ ವಾತಾವರಣ ನೋಡುತ್ತಿದ್ದರೆ ಮಳೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗೆ ಭಯದಲ್ಲೇ ಆರ್‌ಸಿಬಿ ಅಭಿಮಾನಿಗಳು ನರಳಾಡುತ್ತಿದ್ದಾರೆ.

ಆರ್‌ಸಿಬಿ ತಂಡ ಈಗಾಗಲೇ 13 ಪಂದ್ಯ ಆಡಿದ್ದು, 6 ಪಂದ್ಯದಲ್ಲಿ ಗೆದ್ದು 7 ಪಂದ್ಯ ಸೋತಿದೆ. ಆದರೆ ಮುಂದಿನ ಹಂತಕ್ಕೆ ಹೋಗಲು ಆರ್‌ಸಿಬಿ ಬೆಂಗಳೂರು ತಂಡ ಇಂದಿನ ಮ್ಯಾಚ್ ಗೆಲ್ಲಲೇಬೇಕಿದೆ.

ಇಲ್ಲವಾದರೆ ಈ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡಕ್ಕೆ ಅವಕಾಶ ಮಿಸ್ ಆಗಲಿದ್ದು, ಚೆನ್ನೈ ತಂಡವೇ ಮುಂದಿನ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು ಮಳೆ ನಿಲ್ಲಲಿ ದೇವರೆ ಅಂತಾ ಬೇಡಿಕೊಳ್ಳುತ್ತಿದ್ದಾರೆ.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ