ಬೆಳಗಾವಿ: ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ ಬಸ್ತವಾಡೆ ಅಣೆಕಟ್ಟಿನಲ್ಲಿ ವೇದಗಂಗಾ ನದಿಯಲ್ಲಿ ನಡೆದಿದೆ.
ಜಿತೇಂದ್ರ ವಿಲಾಸ್ ಲೋಕ್ರೆ (36), ರೇಷ್ಮಾ ದಿಲೀಪ್ ಏಳಮಲ್ಲೆ (34), ಸವಿತಾ ಅಮರ್ ಕಾಂಬಳೆ (27), ಯಶ್ ದಿಲೀಪ್ ಏಳಮಲ್ಲೆ (17) ಮೃತ ದುರ್ದೈವಿಗಳು.

ಮೃತರಲ್ಲಿ ಇಬ್ಬರು ಬೆಳಗಾವಿಯ ಅಥಣಿ ತಾಲೂಕಿನವರು ಎಂದು ತಿಳಿದುಬಂದಿದೆ.ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಶವಗಳನ್ನು ಹೊರತೆಗೆಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
Laxmi News 24×7